Wednesday, January 22, 2025

ನನಗೆ ಟಿಕೆಟ್​ ಸಿಗದ ವೇಳೆ ಸಮಾಧಾನ ಮಾಡಿ ಸಾಂತ್ವಾನ ಹೇಳಿದ್ದರು : ಪ್ರತಾಪ್​ ಸಿಂಹ

ಬೆಂಗಳೂರು: ಮಾಜಿ ಸಿಎಂ, ರಾಜಕೀಯದ ಮುತ್ಸದ್ದಿ ನಾಯಕ ಎಸ್​.ಎಂ ಕೃಷ್ಣರವರು ನಿಧನರಾಗಿದ್ದು. ರಾಜಕೀಯ ಗಣ್ಯರೆಲ್ಲರು ಬಂದು ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಈ ವೇಳೆ ಬಿಜೆಪಿಯ ಮಾಜಿ ಸಂಸದ ಪ್ರತಾಪ್​ ಸಿಂಹ ಕೂಡ ಅವರ ದರ್ಶನ ಪಡೆದು ಮಾತನಾಡಿದ್ದು. ಅವರೊಂದಿಗಿನ ಒಡನಾಟವನ್ನು ಮತ್ತು ಅವರ ಜನಪರ ಕಾರ್ಯಗಳನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಎಸ್​.ಎಂ ಕೃಷ್ಣರ ಅಂತಿಮ ದರ್ಶನ ಪಡೆದು ಮಾತನಾಡಿದ ಪ್ರತಾಪ್​ ಸಿಂಹ ‘ ಬೆಂಗಳೂರಲ್ಲಿ ಐಟಿ-ಬಿಟಿ ಬರೋಕೆ ಕಾರಣವಾಗಿದ್ದೇ ಎಸ್.ಎಂ.ಕೃಷ್ಣ ಅವರು. ಇದರಿಂದಾಗಿ ಇಂದು ಸಾವಿರಾರು ಜನರಿಗೆ ಉದ್ಯೋಗ ದೊರಕಿದೆ. ಅದಕ್ಕೆ ಇಂದು ಬೆಂಗಳುರು ಐಟಿಸಿಟಿಯಾಗಿದೆ. ಎಂದು ಹೇಳಿದರು.

‘ಎಸ್​ಎಂ ಕೃಷ್ಣರವರು ವಿತ್ತೀಯ ಪಾಲಿಸಿಯನ್ನು ಜಾರಿ ಮಾಡಿದರು. 2000ದ ಇಸವಿಯಲ್ಲೆ ಪಹಣಿಯನ್ನು ಸಾಫ್ಟವೇರ್​ ಮೂಲಕ ನೊಂದಯಿಸುವ ಯೋಜನೆ ತಂದರು. ಇವತ್ತು ಮೈಸೂರಿಗೆ ಅವರ ಕೊಡುಗೆ ಸಾಕಷ್ಟಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರತಾಪ್​ ಸಿಂಹ ‘ ನನಗೆ ಟಿಕೆಟ್ ಸಿಗದ ವೇಳೆ ಎಸ್​.ಎಂ ಕೃಷ್ಣರು ಸಾಂತ್ವನ ಹೇಳಿದರು. ತಲೆಕಡೆಸಿಕೊಳ್ಳಬೇಡ ಅಂತಾ ಸಮಾಧಾನ ಮಾಡಿದರು. ನನಗೆ ಟಿಕೆಟ್​ ಸಿಗದೆ ಇದ್ದಾಗ ಯಾರೂ ಕೂಡ ಬಂದು ಸಂತೈಸಿರಲಿಲ್ಲ. ಆದರೆ ಎಸ್​.ಎಂ ಕೃಷ್ಣರವರು ನನಗೆ ಸಮಾಧಾನ ಮಾಡೋ ಕೆಲಸ ಮಾಡಿದರು. ಅವರು ಎಂದಿಗೋ ಸಭ್ಯತೆ ಮೀರಿ ಮಾತನಾಡಿಲ್ಲ. ಚಿಕ್ಕವರಾಗಲಿ ಅಥವಾ ದೊಡ್ಡವರಾಗಲಿ ಗೌರವ ಕೊಟ್ಟು ಮಾತನಾಡುತ್ತಿದ್ದರು’ ಎಂದು ಹೇಳಿದರು.

RELATED ARTICLES

Related Articles

TRENDING ARTICLES