Sunday, December 22, 2024

2028ರಲ್ಲಿ ನಮಗೆ ಬೇಕಾದ ಸರ್ಕಾರ ತಂದು ಮೀಸಲಾತಿ ಪಡೆಯುತ್ತೇವೆ: ಜಯ ಮೃತ್ಯುಂಜಯ ಸ್ವಾಮೀಜಿ

ಬೆಳಗಾವಿ : ಪಂಚಮಸಾಲಿ ಮೀಸಲಾತಿ ಹೋರಾಟ ಇಂದು ತೀವ್ರ ಸ್ವರೂಪ ಪಡೆದಿದ್ದು. ಮೀಸಲಾತಿಗಾಗಿ ಸುವರ್ಣ ಸೌದಕ್ಕೆ ಮುತ್ತಿಗೆ ಹಾಕುವಾಗ ಪೋಲಿಸರು ಲಾಠಿಚಾರ್ಜ್​ ಮಾಡಿದ್ದು ಇದರ ಕುರಿತು ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ ಇವರು ನಮಗೆ ಮೀಸಲಾತಿ ಕೊಡೋದಿಲ್ಲ ಎಂದು ಹೇಳಿದರೆ, 2028 ಕ್ಕೆ ನಮಗೆ ಬೇಕಾದ ಸರ್ಕಾರವನ್ನು ತಂದು ಮೀಸಲಾತಿ ಪಡೆಯುತ್ತೇವೆ ಎಂದು ಹೇಳಿದರು.

ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ ನೀಡಿದ್ದು ‘ಪಂಚಮಸಾಲಿ ಸಮಾವೇಶ ಶಾಂತಯುತವಾಗಿ ನಡೆಯುತಿತ್ತು. ನಾವು ಕೂಡ ಸಿಎಂ ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ್ದೆವು.
ಸ್ಥಳಕ್ಕೆ ಬಂದ ಸಚಿವರ ಮಾತುಗಳು ನಮಗೆ ಸಮಾಧಾನ ತರಲಿಲ್ಲ. ಹಾಗಾಗಿ ನಾವು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹೋರಟಿದ್ವಿ. ಆದರೆ ಅಲ್ಲಿದ್ದ ಎಡಿಜಿಪಿ, ಕಮಿಷನರ್ ಕುತಂತ್ರದಿಂದ ನಮ್ಮ ಮೇಲೆ ಲಾಠಿಚಾರ್ಜ್​ ಮಾಡಿದರು. ಇದನ್ನು ಸಿಎಂ ಅವರೆ ಹೇಳಿ ಮಾಡಿಸಿದ್ದಾರೆ ಅನ್ನೋ ಅನುಮಾನವಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಸ್ವಾಮೀಜಿಗಳೂ ‘ಲಾಠಿಚಾರ್ಜ್​ನಲ್ಲಿ ಬಹಳಷ್ಟು ಜನರಿಗೆ ಕೈಕಾಲು ಮುರಿದಿದೆ.
ಲಿಂಗಾಯತರ ಮೇಲೆ ಹಲ್ಲೆ ಮಾಡಿದ ಸರ್ಕಾರ ಏಕೈಕ ಸರ್ಕಾರ ಇದು. ಇವರ ಪಿತೂರಿ ನೋಡಿದರೆ ನಮ್ಮ ಮೇಲೆ ಗೋಲಿಬಾರ್​ ಮಾಡ್ತಿದ್ರೂ ಅನ್ಸುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2028ಕ್ಕೆ ನಮಗೆ ಬೇಕಾದ ಸರ್ಕಾರವನ್ನು ತರುತ್ತೇವೆ !

ಈಗೀರುವ ಸರ್ಕಾರ ಲಿಂಗಾಯತರಿಗೆ ಮೀಸಲಾತಿ ಕೊಡಲ್ಲ ಎಂದು ಇವತ್ತೆ ಹೇಳಲಿ. 2028ಕ್ಕೆ ನಮಗೆ ಬೇಕಾದ ಸರ್ಕಾರವನ್ನು ತಂದು ಮೀಸಲಾತಿ ಪಡೆಯುತ್ತೇವೆ. ನಾಡಿದ್ದು ರಾಜ್ಯದ ಜನರು ನಿಮ್ಮ ಹಳ್ಳಿ, ತಾಲ್ಲೂಕು, ಜಿಲ್ಲಾ ರಸ್ತೆ ಬಂದ್ ಮಾಡಿ ಹೋರಾಟ ಮಾಡಿ. ಎಡಿಜಿಪಿ ಮತ್ತು ಕಮಿಷನರ್​ರನ್ನು ಕೂಡಲೇ ಸಸ್ಪೆಂಡ್​ ಮಾಡಿ ಎಂದು ಆಗ್ರಹಿಸಿದರು.

ಮುಂದುವರಿದು ಮಾತನಾಡಿದ ಸ್ವಾಮೀಜಿಗಳು ‘ಗಾಯಗೊಂಡವರನ್ನು ಭೇಟಿ ನೀಡಿ ಅವರ ಚಿಕಿತ್ಸೆ ಭರಿಸುತ್ತೇವೆ. ಯಾರ ಮೇಲೆ ದೌರ್ಜನ್ಯ ಮಾಡಿ ಅನ್ಯಾಯ ಮಾಡಿದ್ದಾರೋ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ಮುಂದಿನ ಹೋರಾಟವನ್ನು ಪ್ರಕಟ ಮಾಡುತ್ತೇವೆ. ಸಿಎಂ ಅವರನ್ನು ನಾವು ಕರೆದಿದ್ವಿ ಅವರು ಬರಲಿಲ್ಲ, ಅವರಿಗೂ ನಮ್ಮನ್ನು ಕರೆಯುವ ಸೌಜನ್ಯ ಇಲ್ಲ ಎಂದು ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದರು .

RELATED ARTICLES

Related Articles

TRENDING ARTICLES