Wednesday, January 22, 2025

ಇಂದು ಯುವಕರಿಗೆ ಉದ್ಯೋಗ ಸಿಗಲು ಕಾರಣ ಎಸ್​.ಎಂ ಕೃಷ್ಣರ ಯೋಜನೆಗಳು : ಪರಮೇಶ್ವರ್​

ಬೆಳಗಾವಿ : ರಾಜ್ಯ ಕಂಡ ಅಪ್ರತಿಮ ರಾಜಕಾರಣಿ ಎಸ್​ಎಂ ಕೃಷ್ಣ ನಿಧನರಾಗಿದ್ದು. ಇವರ ನಿಧನಕ್ಕೆ ಸಂತಾಪ ಸೂಚಿಸಿದ ಗೃಹ ಸಚಿವ ಪರಮೇಶ್ವರ್​ ‘ ಬೆಂಗಳೂರನ್ನು ಐಟಿ ಸಿಟಿಯಾಗಿ ರೂಪಿಸಿದ ಹೆಮ್ಮ ಕೇವಲ ಎಸ್​ಎಂ ಕೃಷ್ಣರಿಗೆ ಸಲ್ಲುತ್ತದೆ. ಇಂದು ಯುವಕರು ಉದ್ಯೋಗ ಪಡೆಯುತ್ತಿದ್ದಾರೆ ಎಂದರೆ ಅದು ಅವರ ಕೊಡುಗೆಯಾಗಿದೆ ಎಂದು ಹೇಳಿದರು.

ಎಸ್.ಎಂ.ಕೃಷ್ಣರವರ ನಿಧನಕ್ಕೆ ಸಚಿವ ಡಾ ಜಿ ಪರಮೇಶ್ವರ ಸಂತಾಪ ಸೂಚಿಸಿದ್ದು. ‘ಎಸ್​.ಎಂ ಕೃಷ್ಣರವರು  ರಾಜ್ಯದಲ್ಲಿ ಐ.ಟಿ ರೆವ್ಯುಲ್ಯೂಷನ್ ಮಾಡಿದರು, ಯುವಕರಿಗೆ ಉದ್ಯೋಗ ಸಿಗಲು ಎಸ್ ಎಂ ಕೃಷ್ಣ ಕಾರಣರಾಗಿದ್ದರು. ಅನೇಕ ರಹಸ್ಯ ವಿಚಾರಗಳಲ್ಲಿ ನನಗೆ ಜವಾಬ್ದಾರಿ ನೀಡಿದ್ದರು. ವೀರಪ್ಪನ್​ ವಿಚಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ನನ್ನ ಬಳಿಯಲ್ಲಿ ಚರ್ಚೆ ನಡೆಸಿದ್ದರು ಎಂದು ಹೇಳಿದರು.

ಇಂದು ರಾಜಕೀಯ ಪರಿಸ್ಥಿತಿ ಬದಲಾಗಿದೆ ಆದರೆ ಎಸ್​ಎಂ ಕೃಷ್ಣ ಎಂದು ಕೂಡ ಕೆಟ್ಟ ಪದ  ಬಳಸಿದ್ದು ನಾಯನು ನೋಡಿಯೇ ಇಲ್ಲ.  ಇವರ ಸಾವು ವೈಕಕ್ತಿಕವಾಗಿ ನನಗೆ ನೋವುಂಡು ಮಾಡಿದೆ ಎಂದು ಹೇಳಿದರು.

ಎಸ್​ಎಂ ಕೃಷ್ಣರವರ ಅಂತ್ಯಕ್ರಿಯೆ ಬಗ್ಗೆ ಮಾತನಾಡಿದ ಸ ಪರಮೇಶ್ವರ್​ ‘ಅವರ ಅಂತ್ಯ ಸಂಸ್ಕಾರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅವರಿಗೆ ನಾವು ಎಂತಹ ಗೌರವ ನೀಡಿದರು ಕೂಡ ಅದು ಕಡಿಮೆಯೆ ಆಗುತ್ತದೆ. ರಾಜ್ಯದಲ್ಲಿ ಶೋಕಾಚರಣೆ ಆಚರಿಸುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES