ಬೆಳಗಾವಿ : ಪಂಚಮ ಸಾಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು. ರೈತರು ಬ್ಯಾರೀಕೇಡ್ಗಳನ್ನು ತಳ್ಳಿ ಸುವರ್ಣಸೌದಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಫ್ರತಿಭಟನಾಕಾರರು ಉದ್ವಿಗ್ನರಾಗುತ್ತಿದ್ದಂತೆ ಪೋಲಿಸರು ಲಾಠಿ ಚಾರ್ಜ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಾಲಾತಿ ನೀಡಬೇಕು ಎಂದು ಸುವರ್ಣ ಸೌದದ ಬಳಿಯಲ್ಲಿ ನಡೆಯುತ್ತಿರುವ ಹೋರಾಟ ತೀವ್ರವಾಗುತ್ತಿದ್ದು. ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಧ್ಯಕ್ಷನಿಗೆ ಧಿಕ್ಕಾರ ಕೂಗಿದ್ದ ಹೋರಾಟಗಾರರು. ಮಧ್ಯಾಹ್ನದ ವೇಳೆಗೆ ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ :ಪಂಚಮಸಾಲಿ ಪ್ರತಿಭಟನೆ : ವೇದಿಕೆ ಮೇಲೆಯೆ ವಿಜಯೇಂದ್ರನಿಗೆ ಧಿಕ್ಕಾರ ಕೂಗಿದ ಹೋರಾಟಗಾರರು !
ಓಮ್ಮೆಲೆ ಉದ್ರಿಕ್ತರಾಗಿರುವ ಹೋರಾಟಗಾರರು ಸುವರ್ಣ ಸೌದಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೋಲಿಸರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಪೋಲಿಸರು ಲಾಠಿ ಪ್ರಹಾರ ನಡೆಸಿದ್ದು. ಲಾಠಿಚಾರ್ಜ್ನಲ್ಲಿ ಸುಮಾರು ಜನ ಪ್ರತಿಭಟನಾಕಾರರಿಗೆ ತೀವ್ರಗಾಯವಾಗಿದೆ ಎಂದು ತಿಳಿದು ಬಂದಿದ್ದು ಅನೇಕರು ಅಸ್ವಸ್ತರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದಕ್ಕೆ ವಿರುದ್ದವಾಗಿ ಪ್ರತಿಭಟನಾಕಾರರು ಕೂಡ ಪೋಲಿಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಎಂದು ಮಾಹಿತಿ ದೊರೆತಿದೆ.