Thursday, January 16, 2025

ಕೊಳ್ಳೇಗಾಲದ ಮಾಜಿ ಶಾಸಕ ಎಸ್​​. ಜಯಣ್ಣ ಹೃದಯಾಘಾತದಿಂದ ಸಾವು

ಚಾಮರಾಜನಗರ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನದ  ಸುದ್ದಿ ರಾಜ್ಯದ ಜನರಿಗೆ ಆಘಾತವನ್ನು ನೀಡಿದೆ. ಆದರೆ, ಇದೀಗ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರೂ ಆಗಿದ್ದ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಎಸ್. ಜಯಣ್ಣ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದ ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಅವರಿಗೆ ಇದೀಗ ಪಕ್ಷದ ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಜಯಣ್ಣ ಅವರು, ಇಂದು ಬೆಳಗ್ಗೆ ಮೈಸೂರಿನ ಕಡೆಗೆ ಕಾರಿನಲ್ಲಿ ಹೋಗುವಾಗ ದಿಢೀರ್ ಹೃದಯಾಘಾತ ಉಂಟಾಗಿದೆ. ಈ ವೇಳೆ ಹತ್ತಿರದ ಜನನಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸದರೂ ಮಾರ್ಗ ಮಧ್ಯದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ಎಸ್. ಜಯಣ್ಣ ಅವರಿಗೆ 72 ವರ್ಷ ವಯಸ್ಸಾಗಿತ್ತು. ಕಳೆದ 1999 ರಲ್ಲಿ ಜೆಡಿಎಸ್ ನಿಂದ ಹಾಗೂ 2013 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಜಯಣ್ಣ ಅವರಿಗೆ ಅನಾರೋಗ್ಯದ ಹಿನ್ನಲೆ 2018ರಲ್ಲಿ ಟಿಕೆಟ್ ಕೊಟ್ಟಿರಲಿಲ್ಲ. ಆದರೆ, ಈ ಬಾರಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ಕಾರದಲ್ಲಿ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. 9-9-1952 ರಲ್ಲಿ ಜನಿಸಿದ್ದ ಎಸ್ ಜಯಣ್ಣ ಅವರ ಅಂತ್ಯಕ್ರಿಯೆಯನ್ನು ನಾಳೆ ಚಾಮರಾಜನಗರ ಜಿಲ್ಲೆ ಮಾಂಬಳ್ಳಿ ಗ್ರಾಮದಲ್ಲಿ ನಡೆಸಲಾಗುತ್ತದೆ ಎಂದು ಕುಟುಂಬ ಮೂಲದಿಂದ ತಿಳಿದುಬಂದಿದೆ.

RELATED ARTICLES

Related Articles

TRENDING ARTICLES