ದೆಹಲಿ: ಎಸ್ಎಂ.ಕೃಷ್ಣರವರು ನಿಧನರಾಗಿರುವ ವಿಷಯವಾಗಿ ಮಾತನಾಡಿದ ಸಂಸದ ಡಾ.ಮಂಜುನಾಥ್ ‘ ಅವರ ಸಾವಿನಿಂದ ನಮಗೆ ಅತೀವ ದುಃಖ ತಂದಿದೆ. ಅವರು ಒಬ್ಬ ಸ್ಟೇಟ್ಸ್ ಮನ್ ರಾಜಕಾರಣಿ ಎಂದು ಹೇಳಿದರು.
ಎಸ್.ಎಂ ಕೃಷ್ಣರವರು ಎಲ್ಲಾ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅವರೇ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟನೆ ಮಾಡಿದರು. ಅವರು ಒಬ್ಬ ಸ್ಟೇಟ್ಸ್ಮೆನ್ ರಾಜ್ಯಕಾರಣಿ. ಅವರೇ ಯಶಸ್ವಿನಿ ಯೋಜನೆಯನ್ನು ಆರಂಭಿಸಿ ಜನರ ಆರೋಗ್ಯದ ಬಗ್ಗೆ ಕಾಳಜಿ ಮಾಡಿದರು. ಅವರು ಕೂಡ ಜಯದೇವ ಆಸ್ಪತ್ರೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸಿ.ಎನ್ ಮಂಜುನಾಥ್ ‘ ಎಸ್,ಎಂ ಕೃಷ್ಣ ಇವತ್ತಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದರು. ಬೆಂಗಳೂರಿನ ಐಟಿ-ಬಿಟಿ ಸ್ವರೂಪಕ್ಕೆ ಹೊಸ ರೂಪ ನೀಡಿದರು. ಹೆಚ್ಚು ಮಾತನಾಡದೆ, ಕೆಲಸ ಮಾಡಿ ತೋರಿಸಿದವರು. ಅವರು ಎಲ್ಲಾ ಪೀಳಿಗೆಗೆ ಮಾದರಿ ನಾಯಕ, ಅವರ ಡ್ರೇಸ್ ಕೋಡ್ ವಿಶಿಷ್ಟವಾಗಿದ್ದರು ಕೂಡ ಹಳ್ಳಿಯ ಸ್ಪರ್ಶ ಅವರನ್ನು ಬಿಟ್ಟಿರಲಿಲ್ಲ. ಅವರಲ್ಲಿ ಸಾಮಾನ್ಯ ಜನರ ಬಗ್ಗೆ ಗ್ರಾಮೀಣ ಭಾಗದ ಜನರ ಬಗ್ಗೆ ಕಾಳಜಿ ಇತ್ತು ಎಂದು ಅವರನ್ನು ನೆನಪಿಸಿಕೊಂಡರು.