Monday, December 23, 2024

ನಟ ದರ್ಶನ್​ಗೆ ನಾಳೆ ಆಪರೇಷನ್​ : ಬಿ.ಪಿ ಕಂಟ್ರೋಲ್​ಗೆ ಬಂದಿಲ್ಲ ಎನ್ನುತ್ತಾರಾ ವೈದ್ಯರು !

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗೆ ಬಂದು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಾಳೆಗೆ ಆರು ವಾರಗಳ ಕಾಲ ಅಯ್ತು.‌ ಅಲ್ಲದೇ ರೆಗ್ಯೂಲರ್ ಬೇಲ್ ಅರ್ಜಿ ವಿಚಾರಣೆಯಲ್ಲಿ ಸಾಕಷ್ಟು ವಾದ ಮಾಡಿರೋ ದರ್ಶನ ಪರ ವಕೀಲರು ಮೆಡಿಕಲ್ ರಿಪೋರ್ಟ್​ಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಜೊತೆಗೆ ದರ್ಶನ ಸರ್ಜರಿ ದಿನಾಂಕವನ್ನು ಕೂಡಾ ತಿಳಿಸಿದ್ದರು. ಇದೀಗ ಬಿಜಿಎಸ್ ಆಸ್ಪತ್ರೆ ವೈದ್ಯರು ಕೂಡಾ ನಾಳೆ ದರ್ಶನಗೆ ಸರ್ಜರಿ ಮಾಡಲು ಮುಂದಾಗಿದ್ದಾರೆ.

ದರ್ಶನ್​ಗೆ ಬೆನ್ನಿನ ಶಸ್ತ್ರ ಚಿಕಿತ್ಸೆ ಮಾಡಲಾಗುವುದರ ಬಗ್ಗೆ ವೈದ್ಯರು ಮಾಹಿತಿಯನ್ನು‌ ನಿನ್ನೆ ನ್ಯಾಯಾಲಯಕ್ಕೆ ದರ್ಶನ ಪರ ವಕೀಲರು ನೀಡಿದ್ದರು. ಈಗಾಗಲೇ ದರ್ಶನ್​​ ಸರ್ಜರಿ ಬಗ್ಗೆ ಕೋರ್ಟ್​ಗೆ ವರದಿಯನ್ನು ವೈದ್ಯರು ತಂಡ ಸಲ್ಲಿಸಿದ್ದಾರೆ. ಬಿಜಿಎಸ್‌ ಆಸ್ಪತ್ರೆ ಬಿಡುಗಡೆ ಮಾಡಿದ ವರದಿಯಲ್ಲಿ ಇದೇ ಡಿಸೆಂಬರ್ 11 ರಂದು ನಟ ದರ್ಶನ್​ಗೆ ಸರ್ಜರಿ ನಡೆಯುವುದರ ಬಗ್ಗೆ ಮಾಹಿತಿ ನೀಡಲಾಗಿದೆ.

ಈ ಬಗ್ಗೆ ಬಿಜಿಎಸ್‌ ಆಸ್ಪತ್ರೆಯ ಹಿರಿಯ ವೈದ್ಯರು ಡಾ ನವೀನ್ ಸರ್ಜರಿ ಮಾಡುವುದರ ಬಗ್ಗೆ ನಿರ್ಧರಿಸಿದ್ದಾರೆ. ಲುಂಬರ್​ ಸ್ಪಾಂಡಿಲೋಸಿಸ್ ನಿಂದ ಬಳಲುತ್ತಿರುವ ದರ್ಶನ್ ಗೆ ನೋವು ಕಡಿಮೆ ಮಾಡಲು ದರ್ಶನ್​ಗೆ ಲುಂಬರ್ ಡಿಕಂಪ್ರೆಶನ್ ಫ್ಯೂಶನ್ ಸರ್ಜರಿ ಮಾಡಲು ವೈದ್ಯರು ಮುಂದಾಗಿದ್ದಾರೆ. ಅಲ್ಲದೇ ನಾಳೆ ದರ್ಶನಗೆ ಸರ್ಜರಿ ಮಾಡಲು ವೈದ್ಯರು ತಂಡ ಸಿದ್ದತೆ ಮಾಡಿಕೊಂಡಿದೆ.

ದರ್ಶನ್​ ಮಧ್ಯಂತರ ಜಾಮೀನು ರದ್ದು ಮಾಡುವಂತೆ ತನಿಖಾ ತಂಡ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ. ಇತ್ತ ದರ್ಶನ್​ ಸರ್ಜರಿಗೆ ಡೇಟ್ ಕೂಡ ಫಿಕ್ಸ್ ಮಾಡಲಾಗಿದೆ. ಒಟ್ನಿಲ್ಲಿ ದರ್ಶನ ಸರ್ಜರಿಯಾದ ಬಳಿಕ ಮತ್ತಷ್ಟು ವಾರಗಳ ಕಾಲಾವಕಾಶ ಕೇಳಲು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES