Monday, December 23, 2024

ಬಾಣಂತಿಯರ ಸಾವಿನ ವಿಚಾರವನ್ನ ಗಂಭೀರವಾಗಿ ಚರ್ಚೆ ಮಾಡುತ್ತೇವೆ : ದಿನೇಶ್​ ಗುಡೂರಾವ್​

ಬೆಳಗಾವಿ: ಬಳ್ಳಾರಿಯ ವಿಮ್ಸ್​​ ಆಸ್ಪತ್ರೆಯಲ್ಲಿ ನಡೆದ ಬಾಣಂತಿಯರ ಸರಣಿ ವಿಚಾರವಾಗಿ ಅಧಿವೇಶನದಲ್ಲಿ ಗಂಭೀರವಾಗಿ ಚರ್ಚೆ ನಡೆಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡುರಾವ್​ ತಿಳಿಸಿದ್ದಾರೆ.

ಚಳಿಗಾಲದ ಅಧಿವೇಶನ ಆರಂಭವಾಗಿದ್ದು. ಇಂದಿನಿಂದ ಬೆಳಗಾವಿಯ ಸುವರ್ಣ ಸೌದ ಕಾವೇರುತ್ತಿದೆ. ರಾಜ್ಯ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವಂತಹ ಅನೇಕ ಅಂಶಗಳು ಈ ಬಾರಿ ವಿಪಕ್ಷಕ್ಕೆ ಸಿಕ್ಕಿದ್ದು. ಅದರಲ್ಲಿ ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಕೂಡ ಸೇರಿಕೊಂಡಿದೆ.

ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಬಾಣಂತಿಯರ ಸಾವಿನ ವಿಚಾರವಾಗಿ ಅಧಿವೇಶನದಲ್ಲಿ ಗಂಭೀರಾ ಚರ್ಚೆ ಆಗಬೇಕು. ಈ ವಿಶಯಕ್ಕೆ ಉತ್ತರ ಕೊಡಲು ನಾವು ರೆಡಿ ಇದ್ದೇವೆ. ನಿಜಾಂಶಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಮರಣಗಳು ಆಗುತ್ತಿವೆ, ಅದಕ್ಕೆಲ್ಲ ಕೇವಲ ವೈದ್ಯಕೀಯ ಪರಿಸ್ಥಿತಿ ಕಾರಣ ಎಂದು ಹೇಳುವಂತಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ದಿನೇಶ್​ ಗುಂಡುರಾವ್​ ‘ಪ್ರತಿ ವರ್ಷ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಇದ್ದೆ ಇರುತ್ತೆ
ಅದನ್ನೆ ಹಿಡಿದುಕ್ಕೊಂಡು ರಾಜಕೀಯ ಉದ್ದೇಶದಿಂದ ಮಾತನಾಡಬಾರದು. ವ್ಯವಸ್ಥೆಯನ್ನು ಸಾಕಷ್ಟು ಸರಿಪಡಿಸುವ ಕೆಲಸ ಇದೆ. ಬಾಣಂತಿಯರ ಮರಣದ ಬಗ್ಗೆ ಬೆಳಗಾವಿಯಲ್ಲಿ ಉತ್ತರ ಕೊಡಲಾಗುತ್ತದೆ. ಮೆಡಿಕಲ್​ ಮಾಫಿಯಾ ವಿಚಾರವಾಗಿ ಸದನದಲ್ಲಿ ಮಾತನಾಡುತ್ತೇನೆ.

ಬಳ್ಳಾರಿಯ ಆಸ್ಪತ್ರೆಯಲ್ಲಿ ಆದ ಮರಣದ ವಿಚಾರವಾಗಿ ನಮಗೆ ಬಹಳ ಚಿಂತನೆ ಇದೆ. ಇದರ ಬಗ್ಗೆ ಸರ್ಕಾರವು ಎಚ್ಚೆತ್ತುಕೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರೆತೆ ಇದೆ. ಮುಂದಿನ ದಿನಗಳಲ್ಲಿ  ನೇಮಕಾತಿ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡುರಾವ್​ ಬೆಳಗಾವಿಯಲ್ಲಿ ಹೇಳಿದರು.

RELATED ARTICLES

Related Articles

TRENDING ARTICLES