ತುಮಕೂರು : ಸಿದ್ದಲಿಂಗಾ ಮಠದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು. ಮಠದ ಮಕ್ಕಳಲ್ಲಿ ಆತಂಕ ಮುಡಿಸಿದೆ. ತುಮಕೂರಿನ ಕ್ಯಾತಸಂದ್ರ ಬಳಿಯಲ್ಲಿರುವ ಸಿದ್ದಲಿಂಗ ಮಠದ ಆವರಣದಲ್ಲಿ ಚಿರತೆ ಓಡಾಡಿರುವುದು ಕಂಡುಬಂದಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಪ್ರತಿಷ್ಟಿತ ಮಠಗಳಲ್ಲಿ ಒಂದಾದ ಸಿದ್ದಲಿಂಗ ಮಠವು ಅಕ್ಷರ ದಾಸೋಹ ಮತ್ತು ಅನ್ನ ದಾಸೋಹಕ್ಕೆ ಹೆಸರಾಗಿದೆ. ಇಲ್ಲಿ ಸಾವಿರಾರು ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದು. ಪ್ರತಿನಿತ್ಯ ಸಾವಿರಾರು ಜನರು ಮಠಕ್ಕೆ ಭೇಟಿ ನೀಡುತ್ತಾರೆ. ಈ ಮಠದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ ಎಂದು ಮಾಹಿತಿ ದೊರೆತಿದೆ.
ಇದನ್ನೂ ಓದಿ : ಎತ್ತಿನಹೊಳೆ ಯೋಜನೆ ಪರಿಹಾರ ವಿಳಂಬ : ಕಾಲುವೆಗೆ ಹಾರಿ ರೈತ ಆತ್ಮಹ*ತ್ಯೆ
ತುಮಕೂರಿನ ಕ್ಯಾತಸಂದ್ರದಲ್ಲಿನ ಹಳೆಮಠದ ಆವರಣದಲ್ಲಿ ಶನಿವಾರ ರಾತ್ರಿ 11:30ಕ್ಕೆ ಚಿರತೆ ಕಾಣಿಸಿಕೊಂಡಿದ್ದು. ಮಠದಲ್ಲಿನ ನಾಯೊಯನ್ನು ಭೇಟೆಯಾಡಲು ಬಂದಿದೆ ಎಂದು ಊಹಿಸಲಾಗಿದೆ. ಚಿರತೆ ಓಡಾಟದಿಂದ ಮಠದ ಮಕ್ಕಳಲ್ಲಿ ಆತಂಕ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.