Sunday, December 22, 2024

ಸುಧಾರಣೆ, ಸಾಧನೆ, ಪರಿವರ್ತನೆ’ ಮಂತ್ರದ ಮೇಲೆ ಭಾರತ ಅಭಿವೃದ್ದಿಗೊಂಡಿದೆ : ನರೇಂದ್ರ ಮೋದಿ

ಜೈಪುರ: ಇಂದು ವಿಶ್ವದ ಪ್ರತಿಯೊಬ್ಬ ತಜ್ಞರು, ಪ್ರತಿಯೊಬ್ಬ ಹೂಡಿಕೆದಾರರು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಸುಧಾರಣೆ, ಸಾಧನೆ, ಪರಿವರ್ತನೆ ಎಂಬ ಮಂತ್ರವನ್ನು ಅನುಸರಿಸಿ ಭಾರತ ಮಾಡಿದ ಅಭಿವೃದ್ಧಿಯು ಪ್ರತಿಯೊಂದು ಕ್ಷೇತ್ರದಲ್ಲೂ ಗೋಚರಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದರು.

ಇಂದು ವಿಶ್ವದ ಪ್ರತಿಯೊಬ್ಬ ತಜ್ಞರು, ಪ್ರತಿಯೊಬ್ಬ ಹೂಡಿಕೆದಾರರು ಭಾರತದ ಬಗ್ಗೆ ಉತ್ಸುಕರಾಗಿದ್ದಾರೆ. ಸುಧಾರಣೆ, ಸಾಧನೆ, ಪರಿವರ್ತನೆ ಎಂಬ ಮಂತ್ರವನ್ನು ಅನುಸರಿಸಿ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯನ್ನು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜೈಪುರ ಪ್ರದರ್ಶನ ಮತ್ತು ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ರೈಸಿಂಗ್ ರಾಜಸ್ಥಾನ ಗ್ಲೋಬಲ್ ಇನ್ವೆಸ್ಟ್‌ಮೆಂಟ್ ಶೃಂಗಸಭೆ 2024 ಅನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜಸ್ಥಾನದ ಅಭಿವೃದ್ಧಿ ಪಯಣದಲ್ಲಿ ಇಂದು ಮತ್ತೊಂದು ಪ್ರಮುಖ ದಿನವಾಗಿದೆ. ದೇಶ ಮತ್ತು ವಿಶ್ವದ ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಮತ್ತು ಹೂಡಿಕೆದಾರರು ಇಲ್ಲಿಗೆ ಬಂದಿದ್ದಾರೆ. ಇಂಡಸ್ಟ್ರಿಯ ಹಲವು ಗೆಳೆಯರು ಕೂಡ ಇಲ್ಲಿ ಇದ್ದಾರೆ. ರೈಸಿಂಗ್ ರಾಜಸ್ಥಾನ ಜಾಗತಿಕ ಹೂಡಿಕೆ ಶೃಂಗಸಭೆಗೆ ನಾನು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇನೆ, ಈ ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ರಾಜಸ್ಥಾನದ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES