Sunday, December 22, 2024

ಉಳ್ಳಾಲದಲ್ಲಿ ಹೈಡ್ರೋಕ್ಲೋರಿಕ್ ಆ್ಯಸಿಡ್ ಸೋರಿಕೆ: ಶ್ವಾಸಕೋಶಕ್ಕೆ ಹಾನಿ ಸಾಧ್ಯತೆ !

ಬೆಂಗಳೂರು : ಚಲಿಸುತ್ತಿದ್ದ ಆ್ಯಸಿಡ್​​ ಟ್ಯಾಂಕರ್​ನಿಂದ ಆ್ಯಸಿಡ್​ ಸೋರಿಕೆಯಾಗಿದೆ ಎಂಬ ಮಾಹಿತಿ ಬಂದಿದ್ದು. ಮಂಗಳೂರಿನ ಹೊರವಲಯದಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಮಂಗಳೂರು ಹೊರವಲಯದ ಉಳ್ಳಾಲದ ಕೋಟೆಕಾರಿನಲ್ಲಿ ಘಟನೆ ನಡೆದಿದ್ದು. ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು- ಉಚ್ಚಿಲ ಮಧ್ಯದ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕಾರವಾರದಿಂದ ಕೊಚ್ಚಿಗೆ ತೆರಳುತ್ತಿದ್ದ ಟ್ಯಾಂಕರ್​ನಲ್ಲಿ ಆ್ಯಸಿಡ್​ ಸೋರಿಕೆಯಾಗಿದ್ದು. ಇದನ್ನು ಗಮನಿಸಿದ ಟ್ಯಾಂಕರ್​ ಚಾಲಕ ಕೂಡಲೇ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದಾನೆ.

ವಿಷಯ ತಿಳಿದು ಉಳ್ಳಾಲದ ಪೋಲಿಸರು ಮತ್ತು ಅಗ್ನಿಶಾಮಕ  ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿದ್ದು. ಎಂಆರ್​ಪಿಎಲ್​ ತಜ್ಙರನ್ನು ಸ್ಥಳಕ್ಕೆ ಕರೆಸು ಆ್ಯಸಿಡ್​ ಖಾಲಿ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಾಹಿತಿ ದೊರೆತಿದೆ. ಆ್ಯಸಿಡ್​ ಸೋರಿಕೆಯಿಂದಾಗಿ ವಾತವರಣದಲ್ಲಿ ಘಾಟು ವಾಸನೆ ಹೆಚ್ಚಾಗಿದ್ದು. ಇದರಿಂದ ಜನರ ಶ್ವಾಸಕೋಶಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES