ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತಿರುವ ನಟ ದರ್ಶನ್ಗೆ ನ್ಯಾಯಾಲಯ ಮತ್ತೊಮ್ಮೆ ರಿಲೀಫ್ ನೀಡಿದ್ದು. ಮಧ್ಯಂತರ ಜಾಮೀನನ್ನು ವಿಸ್ತರಿಸಿ ಆದೇಶ ಹೊರಡಿಸಿದೆ ಎಂದು ಮಾಹಿತಿ ದೊರೆತಿದೆ.
ತೀವ್ರ ಬೆನ್ನು ನೋವಿನಿಂದ ನರಳುತ್ತಿದ್ದ ನಟ ದರ್ಶನ್ ಶಸ್ತ್ರ ಚಿಕಿತ್ಸೆಯ ನೆಪ ಹೇಳಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದರು. ಹಲವಾರು ಷರತ್ತು ವಿಧಿಸಿದ್ದ ನ್ಯಾಯಾಲಯ ದರ್ಶನ್ಗ 42 ದಿನಗಳ ಜಾಮೀನು ಮಂಜೂರು ಮಾಡಿತ್ತು. ಜೈಲಿನಿಂದ ಹೊರಬರುತ್ತಲೆ BGS ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಅಂದಿನಿಂದಲು ಆಪರೇಶನ್ ಮಾಡಿಸಿಕೊಳ್ಳದೆ ಕಳ್ಳಾಟ ಆಡುತ್ತಿದ್ದರು. ಇದನ್ನು ಪ್ರಶ್ನಿಸಿಕೊಂಡು ಪೋಲಿಸ್ ತನಿಖಾಧಿಕಾರಿಗಳು ಜಾಮೀನು ರದ್ದುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಡಿಸೆಂಬರ್ 11 ರಂದು ದರ್ಶನ್ಗೆ ನೀಡಿದ್ದ ಮಧ್ಯಂತರ ಜಾಮೀನು ಅವಧೀ ಮುಗಿದು ಮತ್ತೆ ಜೈಲು ಪಾಲಾಗುತ್ತಾರೆ ಎಂದು ಊಹಿಸಲಾಗಿತ್ತು. ಇದರ ನಡುವೆ ಇಂದು ವಿಚಾರಣೆ ನಡೆಸಿದ ನ್ಯಾಯಾದೀಶ ವಿಶ್ವಜಿತ್ ಪೀಠ ದರ್ಶನ್ ಮಧ್ಯಂತರ ಜಾಮೀನನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.
ದರ್ಶನ್ ಮಧ್ಯಂತರ ಜಾಮೀನು ಅರ್ಜಿಯನ್ನು ವಿಸ್ತರಿಸಬೇಕು ಎಂಬುದರ ಜೊತೆಗೆ ದರ್ಶನ್ ಸಾಮಾನ್ಯ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಹೈಕೋರ್ಟ್. ಸಾಮಾನ್ಯ ಜಾಮೀನು ಅರ್ಜಿಯ ವಿಚಾರಣೆ ಮುಗಿದು ಅದರ ಆದೇಶ ಬರುವವರೆಗೆ ಜಾಮೀನನ್ನು ವಿಸ್ತರಿಸಿದೆ ಎಂದು ಆದೇಶಿಸಿದೆ.