Saturday, January 18, 2025

ಗ್ಯಾಸ್​​ ಲಾರಿ ಮತ್ತು ಬೈಕ್​ ನಡುವೆ ಭೀಕರ ಅಪಘಾತ : ಬೈಕ್​ ಸವಾರ ಸಾ*ವು !

ಆನೇಕಲ್: ಹೊಸೂರು ಮತ್ತು ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು. ಗ್ಯಾಸ್​ ಟ್ಯಾಂಕರ್ ಮತ್ತು ಬೈಕ್​ ನಡುವೆ ಆದ ಅಪಘಾತದಲ್ಲಿ ಸಿಲುಕಿದ ಬೈಕ್​ ಸವಾರ ಸಾವನ್ನಪ್ಪಿದ್ದಾನೆ ಎಂದು ಮಾಹಿತಿ ದೊರೆತಿದೆ.

ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಗೆಸ್ಟ್ ಲೈನ್ ಬಳಿ ಅಪಘಾತ ಸಂಭವಿಸಿದ್ದು. ಬೈಕ್​ ಸವಾರ ಸತೀಶ್​ ತನ್ನ ದ್ವಿಚಕ್ರ ವಾಹನದಲ್ಲಿ ಅತ್ತಿಬೆಲೆ ಮಾರ್ಗವಾಗಿ ಹೋಗುವಾಗ ಅಪಘಾತವಾಗಿದ್ದು. ಈ ವೇಳೆ ಗ್ಯಾಸ್​ ತುಂಬಿದ್ದ ಟ್ಯಾಂಕರ್​​ ಬೈಕ್​ಗೆ ಡಿಕ್ಕಿಯಾಗಿದೆ. ಡಿಕ್ಕಿಯಾಗುತ್ತಿದ್ದಂತೆ ಬೈಕ್​​ ಸವಾರ ಲಾರಿ ಕೆಳಗೆ ಬಿದ್ದಿದ್ದು. ಲಾರಿಯ ಹಿಂಬದಿಯ ಚಕ್ರಕ್ಕೆ ಸಿಲುಕಿ ದೇಹ ತುಂಡಾಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : ವಿಧ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ : ಕಲಬುರಗಿಯಲ್ಲಿ ಬೃಹತ್​ ಪ್ರತಿಭಟನೆ !

ಅಪಘಾತದ ರಭಸಕ್ಕೆ ಬೈಕ್​ ಸವಾರನ ದೇಹ ಛಿದ್ರವಾಗಿದ್ದು. ಸ್ಥಳಕ್ಕೆ ಅತ್ತಿಬೆಲೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ಯಾಸ್​ ಟ್ಯಾಂಕರ್​ ಚಾಲಕನನ್ನು ವಶಕ್ಕೆ ಪಡೆದಿದ್ದು. ಅತ್ತಿಬೆಲೆ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES