Wednesday, January 22, 2025

ಮೋದಿಯಿಂದ ರೈತರಿಗೆ ಪದೇ ಪದೇ ದ್ರೋಹವಾಗುತ್ತಿದೆ : ಮಲ್ಲಿಕಾರ್ಜುನ ಖರ್ಗೆ

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೈತರಿಗೆ ಮತ್ತೆ ಮತ್ತೆ ದ್ರೋಹ ಬಗೆದಿದ್ದು, ರೈತರು ನ್ಯಾಯ ಕೇಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರೈತರು ನ್ಯಾಯಕ್ಕಾಗಿ ಪದೇ ಪದೇ ದೆಹಲಿಯ ಬಾಗಿಲಿಗೆ ಏಕೆ ಬರಬೇಕು’ ಎಂದು ಪ್ರಧಾನಿ ಮೋದಿ ಅವರನ್ನು ಖರ್ಗೆ ಪ್ರಶ್ನಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ, ‘ಹರಿಯಾಣ ಮತ್ತು ರಾಜಸ್ಥಾನ ಪ್ರವಾಸದಲ್ಲಿರುವ ನೀವು, ದೇಶಕ್ಕೆ ಅನ್ನ ನೀಡುವ ರೈತರ ಹೋರಾಟವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಎಂದು ನಾನು ಭಾವಿಸುತ್ತೇನೆ. ನಿಮ್ಮ ಸರ್ಕಾರ ಪದೇ ಪದೇ ದ್ರೋಹ ಮಾಡಿರುವುದರಿಂದ ರೈತರು ನ್ಯಾಯ ಕೇಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

2022ರ ವೇಳೆಗೆ ದೇಶದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯನ್ನು ನೀಡಿದ್ದೀರಾ. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಮೀಡಲು ಸಮಿತಿಯನ್ನು ರಚಿಸಿಲ್ಲ. ಇದೇ ರೀತಿಯಗಿ ನೀವು ನಿರಂತರವಾಗಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದೀರಾ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES