ಮಂಡ್ಯ : 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ‘ಬಾಡು ನಮ್ ಗಾಡು’ ಎಂಬ ಘೋಷಣೆಯೊಂದಿಗೆ ಆರಂಭವಾದ ಹೋರಾಟ ಜಿಲ್ಲಾಧಿಕಾರಿಗಳ ಅಂಗಳ ತಲುಪಿದೆ.
87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದ್ದು. ಇದೇ ತಿಂಗಳು 20ನೇ ತಾರೀಖಿನಿಂದ ಮೂರು ದಿನಗಳ ಕಾಲ ಸಮ್ಮೇಳನ ಜರುಗಲಿದೆ. ಈ ಬಾರಿಯ ಸಮ್ಮೇಳನ ಸಕ್ಕರೆ ನಾಡು ಎಂದೆ ಜನಜನಿತವಾಗಿರುವ ಮಂಡ್ಯದಲ್ಲಿ ನಡೆಯುತ್ತಿದ್ದು. ಈ ಸಮ್ಮೇಳನದಲ್ಲಿ ಬಾಡೂಟ ಹಾಕಿಸಬೇಕು ಎಂದು ಪ್ರಗತಿ ಪರರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರಗತಿ ಪರರು ಪ್ರತಿಭಟನೆ ನಡೆಸಿದ್ದು. ಕಚೇರಿ ಮುಂದೆಯೆ ಮೊಟ್ಟೆ ತಿನ್ನುವ ಮೂಲಕ ಹೋರಾಟ ಮಾಡಿದ್ದಾರೆ. ಒಂದು ವೇಳೆ ಜಿಲ್ಲಾಡಳಿತ ಸಮ್ಮೇಳನದಲ್ಲಿ ಬಾಡೂಟ ಆಯೋಜನೆ ಮಾಡದೆ ಇದ್ದರೆ ನಾವೇ ಆಯೋಜನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಒಟ್ಟಿನಲ್ಲಿ ಬಾಡೂಟ ಬಳಗದ ಹೋರಾಟ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.