Wednesday, January 22, 2025

ಬೆಳಗಾವಿ ಅಧಿವೇಶನ ಆರಂಭ : ಮೊದಲ ದಿನವೇ 11 ಸಂಘಟನೆಗಳಿಂದ ಪ್ರತಿಭಟನೆಗೆ ಸಿದ್ದತೆ !

ಬೆಳಗಾವಿ : ವಿಧಾನಸಭೆಯ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದ್ದು. ಅಧಿವೇಶನದ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆಗಳು ಸುರ್ವಣ ಸೌದದ ಹೊರವಲಯದಲ್ಲಿ ನಡೆಯುತ್ತಿವೆ. ಜಿಲ್ಲಾಡಳಿತದಿಂದ ಪ್ರತಿಭಟನೆ ನಡೆಸಲು ವ್ಯವಸ್ಥೆ ಕಲ್ಪಿಸಿದ್ದು. ನಿಗದಿ ಪಡಿಸಿದ ಸ್ಥಳದಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗಿದೆ.

ಸುವರ್ಣಸೌಧದ ಹತ್ತಿರದಲ್ಲಿರುವ ಸುವರ್ಣ ಗಾರ್ಡನನಲ್ಲಿ ಹಾಗೂ ಕೊಂಡಸಕೊಪ್ಪದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಸಿದ್ದು. ಕರ್ನಾಟಕ ರೈತ ಸಂಘದ‌ ಹಸಿರು ಬ್ರಿಗೇಡ್, ಅಖಿಲ ಕರ್ನಾಟಕ ರೈತ ಸಂಘ
KSRTC ನಿಗಮದ ಕಾರ್ಮಿಕ ಒಕ್ಕುಟ ಸೇರಿದಂತೆ ಒಟ್ಟು 11 ಸಂಘಟನೆಗಳು ವಿವಿಧ ಭೇಡಿಕೆ ಈಡೇರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಅಧಿವೇಶನಕ್ಕೆ ಪೋಲಿಸ್​ ಸರ್ಪಗಾವಲು !

ಚಳಿಗಾಲ ಅಧಿವೇಶನಕ್ಕೆ ಬಿಗಿಭದ್ರತೆಯನ್ನು ಕಲ್ಪಿಸಲಾಗಿದ್ದು. ಬಿಎನ್​ಎಸ್​ಎಸ್​​ ಕಾಯ್ದೆಯ 163 ಕಲಂ ಅಡಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಒಟ್ಟು 7 ಎಸ್​ಪಿ, 12 ಎಎಸ್ಪಿ,‌ 43 ಡಿಎಸ್ಪಿ , 123 ಸಿಪಿಐ ಸೇರಿದಂತೆ ಒಟ್ಟು 4156 ಪೋಲಿಸ್ ಸಿಬ್ಬಂದಿ‌ಗಳನ್ನು  ನಿಯೋಜನೆ ಮಾಡಿದ್ದು. 35 KSRP, 10 ಡಿಆರ್ ತುಕಡಿ,‌ 10 ಡ್ರೋನ್​ ಕ್ಯಾಮರಾ ಜೊತೆಗೆ 300/ಬಾಡಿ ಕ್ಯಾಮರಾಗಳನ್ನು ಭದ್ರತೆ ದೃಷ್ಟಿಯಿಂದ ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES