Wednesday, January 22, 2025

ಫ್ರಿಡ್ಜ್​ ರಿಪೇರಿ ನೆಪದಲ್ಲಿ ಮನೆಗೆ ಬಂದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಯುವಕ !

ಮಂಗಳೂರು : ಫ್ರಿಡ್ಜ್​ ರಿಪೇರಿಗೆ ಎಂದು ಮನೆಗೆ ಬಂದು ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು. ಅತ್ಯಾಚಾರದ ವಿಡಿಯೋ ಚಿತ್ರಿಕರಿಸಿಕೊಂಡು ಮಹಿಳೆಗೆ ಬ್ಲಾಕ್​ ಮೇಲ್​ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಮಹಮ್ಮದ್​ ಶಫೀನ್​​ ಎಂಬಾತ ಫ್ರಿಡ್ಜ್​ ರಿಪೇರಿ ನೆಪವೊಡ್ಡಿ ಮಹಿಳೆಯ ಮನೆಗೆ ಬಂದಿದ್ದು. ಮನೆಗೆ ಬಂದಾತ ಮಹಿಳೆಗೆ ಕುಡಿಯಲು ಜ್ಯೂಸ್​ ಕೊಟ್ಟಿದ್ದಾನೆ. ಜ್ಯೂಸ್​​ನಲ್ಲಿ ಅಮಲು ಬರುವ ಪುಡಿಯನ್ನು ಬೆರೆಸಿದ್ದರಿಂದ ಜ್ಯೂಸ್​ ಕುಡಿದ ತಕ್ಷಣ ಮಹಿಳೆ ಅಮಲಿನಲ್ಲಿ ಮಲಗಿಕೊಂಡಿದ್ದಾಳೆ.

ಇದೆ ಸಮಯವನ್ನು ಉಪಯೋಗಿಸಿಕೊಂಡ ದುರುಳ  ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು. ಮಹಿಳೆಯ ನಗ್ನ ವಿಡೀಯೋ ಮಾಡಿಕೊಂಡು ಆಕೆಯನ್ನು ಬ್ಲಾಕ್​ ಮೇಲ್​ ಮಾಡಿದ್ದಾನೆ . ಮುಂದೆಯು ತನ್ನೊಂದಿಗೆ ಸಹಕರಿಸುವಂತೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಮಹಿಳೆಯ ಬಳಿಯಲ್ಲಿದ್ದ ಕಾರನ್ನು ತೆಗೆದುಕೊಂಡು ಹೋಗಿದ್ದಾನೆ.

ಮಹಿಳೆಯು ಮಂಗಳೂರಿನ ಕದ್ರಿ ಪೋಲಿಸ್​ ಠಾಣೆಯಲ್ಲಿ ದೂರು ನೀಡಿದ್ದು. ಮಹಿಳೆಯ ದೂರಿನ ಮೇರೆಗೆ ಫೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯಾದ ಮೊಹಮ್ಮದ್​ ಶಫೀನ್​ನನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES