ಬೆಂಗಳೂರು : ರಾಜಧಾನಿಯಲ್ಲಿ ಮಂಗಳ ಮುಖಿಯರ ಗಲಾಟೆ ಮುಂದುವರಿದಿದ್ದು. ಹಂಪಿನಗರದಲ್ಲಿ ಬಟ್ಟೆ ಅಂಗಡಿಯ ಉದ್ಘಾಟನೆ ಸಮಯದಲ್ಲಿ ಅಂಗಡಿಗೆ ನುಗ್ಗಿದ ಮಂಗಳ ಮುಖಿಯರು 10 ಸಾವಿರ ಕೊಡು ಎಂದು ಡಿಮ್ಯಾಂಡ್ ಮಾಡಿದ್ದಾರೆ. ಇದಕ್ಕೆ ಒಪ್ಪದ ಇದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಶುಭ ಕಾರ್ಯಕ್ರಮ ಬಂತು ಎಂದರೆ ಸಾಕು ಭಯ, ಆತಂಕ ಶುರುವಾಗುತ್ತೆ. ಮನೆ, ಆಫೀಸ್, ಶಾಪ್ ಮುಂದೆ ಹಬ್ಬದ ವಾತವರಣವಿದ್ದರೆ ಸಾಕು ಆ ಜಾಗಕ್ಕೆ ಎಂಟ್ರಿ ಕೊಡುವ ಮಂಗಳಮುಖಿಯರು ಹಣ ಕೊಡುವಂತೆ ಪೀಡಿಸುತ್ತಾರೆ ಕೊಡದೆ ಇದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಲು ಯತ್ನಿಸುತ್ತಾರೆ. ಅದೇ ರೀತಿ ಬೆಂಗಳೂರಿನಲ್ಲಿಯು ನಡೆದಿದ್ದು ಏನಾಗಿದೆ ಎಂಬುದನ್ನು ಕೆಳಗಿನ ವರದಿಯಲ್ಲಿ ನೋಡಿ.
ಇಂದು ವಿಜಯನಗರದ ಹಂಪಿನಗರದ ಬಳಿಯಲ್ಲಿ ಬಟ್ಟೆ ಅಂಗಡಿಯನ್ನು ಉದ್ಘಾಟಿಸಿದ್ದ ಮಾಲೀಕ ರಾಘವೇಂದ್ರ ಇನ್ನು ಮುಂದೆ ಎಲ್ಲಾ ಒಳ್ಳೆಯದಾಗಲಿ ಎಂದು ಹೋಮ ಮಾಡಿಸುತ್ತಿದ್ದ. ಸರಿಯಾಗಿ ಪೂಜೆ ಸಮಯಕ್ಕೆ ಎಲ್ಲಿಗೆ ಎಂಟ್ರಿ ಕೊಟ್ಟ ಮಂಗಳ ಮುಖಿಯರ ತಂಡ 10 ಸಾವಿರ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಆದರೆ ಅಂಗಡಿ ಮಾಲೀಕ 2 ಸಾವಿರ ಕೊಟ್ಟು ಹೋಗುವಂತೆ ಸೂಚಿಸಿದ್ದ. ಆದರೆ ಇದಕ್ಕೆ ಒಪ್ಪದ ಮಂಗಳಮುಖಿಯರ ತಂಡ ರಾಘವೇಂದ್ರನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿ ರಂಪಾಡ ಮಾಡಿದ್ದಾರೆ.
ಇದರ ಕುರಿತು ಮಾತನಾಡಿರುವ ರಾಘವೇಂದ್ರ ಶುಭ ಕಾರ್ಯ ಬಂದ್ರೆ ಸಾಕು ಮಂಗಳಮುಖಿಯರು ಬಂದು ಹಣಕ್ಕೆ ಭೇಡಿಕೆ ಇಡುತ್ತಾರೆ. ನಮಗೆ ತಿಳಿದಷ್ಟು ಹಣ ಕೊಟ್ಟರೆ ಅವರು ಒಪ್ಪದೆ ಇನ್ನು ಹೆಚ್ಚು ಹಣ ನೀಡುವಂತೆ ದಬ್ಬಾಳಿಕೆ ಮಾಡುದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ರಾಘವೇಂದ್ರ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.