Monday, December 23, 2024

ಕೋಣಕ್ಕಾಗಿ ಊರುಗಳ ಮಧ್ಯೆ ಫೈಟ್​​ : ಕೋಣವನ್ನ ಬಂಧಿಸಿ ವಶಕ್ಕೆ ಪಡೆದ ಪೋಲಿಸರು !

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಕುಣಿಬೆಳಕೆರೆ ಮತ್ತು ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರ ಮಧ್ಯೆ ಕೋಣಕ್ಕಾಗಿ ಫೈಟ್ ನಡೆಯುತ್ತಿದ್ದು. ಎರಡು ಊರಿನ ಗ್ರಾಮಸ್ಥರು ಕೋಣ ನಮ್ಮದು ಎಂದು ಪೋಲಿಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು. ಕುಣಿಬೆಳಕೆರೆ ಗ್ರಾಮಸ್ಥರು ಕೋಣ ನಮ್ಮದೆಂದು ಮಲೆಬೆನ್ನೂರು ಪೋಲಿಸ್​ ಠಾಣೆ ಮೆಟ್ಟಿಲೇರಿದ್ದಾರೆ. ಇದಕ್ಕೆ ಪ್ರತಿಯಾಗಿ ಕುಳಗಟ್ಟೆ ಗ್ರಾಮಸ್ಥರು ಕೂಡ ಹೊನ್ನಳಿ ಪೋಲಿಸ್​ ಠಾಣೆ ಮೆಟ್ಟಿಲೇರಿದ್ದಾರೆ. ಎರಡು ಗ್ರಾಮಗಳ ನಡುವಿನ ಪರಿಸ್ಥಿತಿ ವಿಕೋಪಕ್ಕೆ ತಿರುಗವ ಹಂತಕ್ಕೆ ಬಂದಿರುವುದನ್ನು ಗಮನಿಸಿದ ಪೋಲಿಸರು ಕೋಣವನ್ನು ಬಂಧಿಸಿ ಶಿವಮೊಗ್ಗ ಗೋಶಾಲೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಕಡೆಯ ಗ್ರಾಮಸ್ಥರು ನಮ್ಮ ಕೋಣ 8 ವರ್ಷದು ಎಂದು ವಾದಿಸುತ್ತಿದ್ದರೆ. ಇನ್ನೊಂದು ಗ್ರಾಮದ ಗ್ರಾಮಸ್ಥರು 3 ವರ್ಷ ಎಂದು ಹೇಳುತ್ತಿದ್ದಾರೆ. ಇದೀಗ ಕೋಣಕ್ಕೆ ಎಷ್ಟು ವಯಸ್ಸು ಎಂದು ಕಂಡುಹಿಡಿಯಲು ಪಶು ವೈದ್ಯಾಧಿಕಾರಿಗಳ ಮೊರೆ ಹೋಗಿದ್ದು. ಕೋಣದ ಹಲ್ಲಿನ ಮೇಲೆ ಅದಕ್ಕೆ ಎಷ್ಟು ವಯಸ್ಸಾಗಿದೆ ಎಂದು ಗುರುತಿಸಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES