ಚಿತ್ರದುರ್ಗ : ಆರೋಪಿ ದರ್ಶನ್ ಮತ್ತು ಆತನ ಸಂಗಡಿಗರಿಂದ ಹತ್ಯೆಗೀಡಾಗಿದ್ದ ರೇಣುಕಾಸ್ವಾಮಿ ಕುಟುಂಬಸ್ಥರು ದೇವರ ಮೊರೆ ಹೋಗಿದ್ದು. ಮನೆಯ ಶಾಂತಿಗಾಗಿ ಮತ್ತು ಕುಟುಂಬದ ಸಮೃದ್ದಿಗಾಗಿ ಜಗದ್ಗುರು ರಂಭಾಪುರಿ ಶ್ರೀಗಳಿಂದ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ರೇಣುಕಾಸ್ವಾಮಿ ಮನೆಗೆ ಕಳೆದ ಎರಡು ದಿನಗಳ ಹಿಂದೆ ಭೇಟಿ ನೀಡಿದ ಜಗದ್ಗುರು ರಂಭಾಪುರಿ ಶ್ರೀಗಳು ಮನೆಯಲ್ಲಿ ವಿಶೇಷ ಶಿವ ಪೂಜೆ ಕೈಗೊಂಡಿದ್ದಾರೆ. ಚಿತ್ರದುರ್ಗದ VRS ಬಡಾವಣೆಯಲ್ಲಿರು ರೇಣುಕಾಸ್ವಾಮಿ ಮನೆಯಲ್ಲಿ ಪೂಜೆ ನಡೆದಿದ್ದು. ರೇಣುಕಾಸ್ವಾಮಿ ಆತ್ಮ ಶಾಂತಿಗಾಗಿ ಮತ್ತು ಮನೆಯ ಒಳಿತಿಗಾಗಿ ಪೂಜೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಜೊತೆಗೆ ಮೃತ ರೇಣುಕಾಸ್ವಾಮಿಗೆ ಗಂಡು ಮಗು ಜನಿಸಿದ್ದು ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪೂಜೆ ನಡೆಸಿದ್ದಾರೆ. ಪೂಜೆಯಲ್ಲಿ ರೇಣುಕಾಸ್ವಾಮಿ ಕುಟುಂಬಸ್ಥರು ಭಾಗಿಯಾಗಿದ್ದು. ಕಾಶಿನಾಥ್ ಶಿವನಗೌಡ ಎಂಬುವವರ ಆಹ್ವಾನದ ಮೇರೆಗೆ ರಂಭಾಪುರಿ ಶ್ರೀ ಗಳು ಬಂದು ಪೂಜೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.