Sunday, January 26, 2025

ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ: ಆಸ್ಪತ್ರೆ ಬೆಡ್​ ಮೇಲೆ ಬಿಂದಾಸ್​ ಆಗಿ ಮಲಗಿದ ನಾಯಿ

ಕಲಬುರಗಿ : ಕಲಬುರಗಿಯ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಗೂಡಾಗಿದ್ದು. ಆಸ್ಪತ್ರೆಯ ಬೆಡ್​​ ಮೇಲೆ ರೋಗಿಗಳ ಬದಲು ಶ್ವಾನಗಳು ಮಲಗಿ ನಿದ್ರಿಸುತ್ತಿವೆ. ಇದರ ಕುರಿತು ಜನರು ಅನೇಕ ಬಾರಿ ಆಸ್ಪತ್ರೆಯ ಡಿಎಚ್​ಓಗೆ ದೂರು ನೀಡಿದ್ದರು. ಆಸ್ಪತ್ರೆಯ ಮುಖ್ಯ ವೈಧ್ಯಾಧಿಕಾರಿ ಇದರ ಬಗ್ಗೆ ಕ್ಯಾರೆ ಎನ್ನುತಿಲ್ಲ ಎಂದು ತಿಳಿದು ಬಂದಿದೆ.

ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಡೊಂಗರಗಾಂವ್ ಗ್ರಾಮದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರ ಅವ್ಯವಸ್ಥೆಯ ಗೂಡಾಗಿದ್ದು. ಆಸ್ಪತ್ರೆ ರೋಗಿಗಳ ಬದಲು ನಾಯಿಗಳ ಅಡ್ಡೆಯಾಗಿ ಬದಲಾಗಿದೆ. ನಾಯಿಗಳು ಬಂದು ಆಸ್ಪತ್ರೆಯ ಬೆಡ್​​ ಮೇಲೆ ಮಲಗಿರುವ ದೃಷ್ಯ ಮೊಬೈಲ್​ ಪೋನ್​ಗಳಲ್ಲಿ ಸೆರೆಯಾಗಿದೆ. ಅವುಗಳನ್ನು ಓಡಿಸುವ ಸೌಜನ್ಯವು ಕೂಡ ಆಸ್ಪತ್ರೆಯಲ್ಲಿ ಯಾರಿಗೂ ಇಲ್ಲದೆ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದರ ಬಗ್ಗೆ ಜನರು ಅನೇಕ ಬಾರಿ ಆಸ್ಪತ್ರೆಯ ಮುಖ್ಯವೈದ್ಯಾದಾಕಾರಿಯ ಗಮನಕ್ಕೆ ತಂದಿದ್ದರು ಕೂಡ ಆಸ್ಪತ್ರೆಯ ಡಿಎಚ್​ಓ ಇದರ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಹಾಗೂ ಜನರಿಗೆ ಬರವಣಿಗೆಯಲ್ಲಿ ಬರೆದು ದೂರು ಕೊಡಿ ಎಂದು ಹೇಳುತ್ತಿದ್ದಾನೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES