Saturday, January 18, 2025

ಲವರ್​ ಮನೆಯ ಮುಂದೆಯೆ ನೇಣಿಗೆ ಶರಣಾದ ಪ್ರೇಮಿ!

ತುಮಕೂರು: ಪ್ರೀತಿಸಿದ ಯುವತಿಯ ಕುಟುಂಬ್ಥರು ಮದುವೆಗೆ ನಿರಾಕರಿಸಿದಕ್ಕೆ ಮನನೊಂದ ಯುವಕ ಯುವತಿ ಮನೆಯ ಮುಂದೆಯೆ ನೇಣಿಗೆ ಶರಣಾಗಿದ್ದು. ಮೃತ ವ್ಯಕ್ತಿಯನ್ನು 32 ವರ್ಷದ ಮಂಜುನಾಥ್​ ಎಂದು ಗುರುತಿಸಲಾಗಿದೆ.

ತುಮಕೂರಿನ ಜಯನಗರ ಬಳಿಯ ಚನ್ನಪ್ಪನಪಾಳ್ಯದಲ್ಲಿ ಘಟನೆ ನಡೆದಿದ್ದು.ಟಿಟಿ ವಾಹನದ ಚಾಲಕನಾಗಿದ್ದ ಮಂಜುನಾಥ್​ ಪಕ್ಕದ ಮನೆಯ ಯುವತಿಯನ್ನು ಕೆಲ ತಿಂಗಳಿಂದ ಪ್ರೀತಿಸುತ್ತಿದ್ದನು. ಯುವತಿಯು ಕೂಡ ಮಂಜುನಾಥ್​ನನ್ನು ಪ್ರೀತಿಸುತ್ತಿದ್ದಳು. ಆದರೆ ಯುವತಿ ಆಪ್ರಾಪ್ತಳಾಗಿದ್ದರಿಂದ ಯುವತಿ ಮನೆಯವರು ಯುವತಿಯನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದರು.

ಇದರಿಂದ ಮನನೊಂದ ಯುವಕ ಮಂಜುನಾಥ್​ ತಡರಾತ್ರಿ ಯುವತಿ ಮನೆಯ ಮುಂದೆಯೆ ನೇಣಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಜಯನಗರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಭಂದ ಜಯನಗರ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES