ಬೆಳಗಾವಿ : ನಾವೆಲ್ಲರೂ ಮನೆ, ಬೈಕ್, ಎಟಿಎಂ, ಚಿನ್ನ ಕಳ್ಳತನ ಪ್ರಕರಣ ಕೇಳಿದ್ದೇವೆ..ಆದ್ರೆ ಇಲ್ಲಿ ಮಾರ್ಕಂಡೇಯ ನದಿಯ 64 ಬ್ಯಾರೇಜ್ ಗೇಟಗಳು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.
ಕುಂದಾನಗರಿ ಬೆಳಗಾವಿಯಲ್ಲಿ ಸರ್ಕಾರಿ ಅಧಿಕಾರಿಗಳು ಅಷ್ಟೇ ಅಲ್ಲಾ ಪೊಲೀಸ್ ಅಧಿಕಾರಿಗಳು ತಲೆ ಕೆಡೆಸಿಕೊಂಡಿದ್ದಾರೆ. ಯಾಕೆಂದರೆ ಬೆಳಗಾವಿ ಜಿಲ್ಲೆಯ ಅಂದ್ರೆ ಸಪ್ತ ನದಿಗಳ ತವರು. ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ಯಾರೇಜ್ ಗೇಟಗಳೇ ಕಳ್ಳತನ ಆಗಿವೆ. ಅದು ಬರೊಬ್ಬರೀ 64 ಬ್ಯಾರೇಜ್ ಗೇಟ್ ಕಳ್ಳತನ ಆಗಿವೆ.
ಕಳೆದ ಮೇ ತಿಂಗಳಲ್ಲಿ ಮಳೆ ಅಬ್ಬರಕ್ಕೆ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿತ್ತು. ಹೀಗಾಗಿ ನೀರಾವರಿ ಇಲಾಖೆ ಅಧಿಕಾರಿಗಳು ಬ್ಯಾರೇಜ್ ಗೆ ಹಾಕಿದ್ದ 64 ಗೇಟಗಳನ್ನ ತೆಗೆದು ಪಕ್ಕದಲ್ಲೇ ಇರೋ ಶೆಡ್ಡನಲ್ಲಿ ಇಟ್ಟಿದ್ದರು. ಆದ್ರೆ ಯಾವಾಗ ಮತ್ತೆ ಬ್ಯಾರೇಜ್ ಗೆ ಗೇಟ್ ಹಾಕಲು ನವೆಂಬರ್29 ರಂದು ಶೆಡ್ಡ್ ಗೆ ಹೋಗಿ ನೋಡಿದಾಗ ಕಳ್ಳತನ ಆಗಿರೋದು ಪತ್ತೆಯಾಗಿದೆ.
ಬ್ಯಾರೇಜ್ ಗೇಟ್ ಕಳ್ಳತನ ವಿಚಾರ ಮೇಲಾಧಿಕಾರಿ ಗಮನಕ್ಕೆ ತರುತ್ತಿದ್ದಂತೆ ತಕ್ಷಣವೇ ಬೆಳಗಾವಿ ಕಾಕತಿ ಪೊಲೀಸ್ ಠಾಣೆಯಲ್ಲಿ ಗೇಟ್ ಕಳ್ಳತನ ಕೇಸ್ ದಾಖಲಾಗಿಸಿದ್ದಾನೆ ನೀರಾವರಿ ಇಲಾಖೆ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಇನ್ನೂ ಬೆಳಗಾವಿ ನಗರದಲ್ಲಿ ಸಾಮಾನ್ಯವಾಗಿ ಅಂತರಾಜ್ಯ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಿರುವಾಗ ಮಾರ್ಕಂಡೇಯ ನದಿ ಬ್ಯಾರೇಜ್ ಗೇಟ್ ಕಳ್ಳತನ ಪ್ರಕರಣ ಕಾಕತಿ ಪೊಲೀಸರ ನಿದ್ದೆಗೆಡಿಸಿದೆ. ಯಾಕೆಂದರೆ ಒಂದೊಂದು ಗೇಟಗಳನ್ನ ಕನಿಷ್ಠ 10 ಜನರಿಂದ ಮಾತ್ರ ಎತ್ತಿಡಲು ಸಾಧ್ಯವಿದೆ. ಇಲ್ಲವೇ ಜೆಸಿಬಿಯಂತಹ ಯಂತ್ರದಿಂದ ಎತ್ತಿಡಬಹುದು.
ಗೇಟ್ ಕಳ್ಳತನದಿಂದ ಮಾರ್ಕಂಡೇಯ ನದಿ ಪಾತ್ರ ರೈತರು ಕಂಗಾಲಾಗಿದ್ದಾರೆ. ಬ್ಯಾರೇಜ್ ಗೆ ಗೇಟ್ ಹಾಕಿದ್ದರೆ ನೀರು ಹರಿದು ಹೋಗದನ್ನ ತಡೆಯಬಹುದಿತ್ತು.ಈಗ ಬ್ಯಾರೇಜ್ ಗೆ ಗೇಟ್ ಇಲ್ಲದಕ್ಕೆ ಬಹುಪಾಲು ನೀರು ಹರಿದು ಹೋಗಿದೆ. ಇದು ರೈತರು ತಮ್ಮ ಬೆಳೆಗೆ ನೀರಿನ ಕೊರತೆ ಎದುರಾಗುವ ಆತಂಕ ಸೃಷ್ಟಿಯಾದ್ರೆ. ಮತ್ತೊಂದೆಡೆ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ಧೂದಗಂಗಾ, ಹೀರಣ್ಯಕೇಶಿ, ಮಾರ್ಕಂಡೇಯ ನದಿಗಳಿವೆ.ಇದರಲ್ಲಿ ಕೆಲ ನದಿಗಳಿಗೆ ಚಿಕ್ಕ ಚಿಕ್ಕ ಬ್ಯಾರೇಜ್ ಗಳಿವೆ. ಹೀಗಾಗಿ ಮಾರ್ಕಂಡೇಯ ನದಿಯಂತೆ ಜಿಲ್ಲೆಯ ಬೇರೆ ಕಡೆಯೂ ಬ್ಯಾರೇಜ್ ಗೇಟಗಳು ಕಳ್ಳತನ ಆಗಿರೋ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಮಾರ್ಕಂಡೇಯ ನದಿಯ ಬ್ಯಾರೇಜ್ ಗೇಟ್ ಕಳ್ಳತನ ರಾಜ್ಯದಲ್ಲಿಯೇ ಅಪರೂಪದ ಪ್ರಕರಣವಾಗಿದ್ರೆ. ಇತ್ತ ಅಧಿಕಾರಿಗಳು, ಪೊಲೀಸರ ನೆಮ್ಮದಿಯಂತೆ ಕಳ್ಳರು ಹಾಳು ಮಾಡಿದ್ದಾರೆ. ಸರ್ಕಾರ ಇಂತಹ ಪ್ರಕರಣ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕಿದೆ.