ತುಮಕೂರು: ರಾಜ್ಯದಲ್ಲಿ ಹೆಚ್ಚಾಗಿರುವ ಸಿಎಂ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದರ ನಡುವೆ ಗೃಹ ಸಚಿವ ಪರಮೇಶ್ವರ್ ಕೂಡ ಪರೋಕ್ಷವಾಗಿ ಸಿಎಂ ಸ್ಥಾನದ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಬಿಜೆಪಿ ಶಾಸಕ ಸುರೇಶ್ ಗೌಡ ಮಾತನಾಡಿದ್ದು. ಪರಮೇಶ್ವರ್ ಅವರು ಸಿಎಂ ಆಗಬೇಕು ಎಂಬ ಆಸೆಯನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ತುಮಕೂರಿನಲ್ಲಿ ಪರಮೇಶ್ವರ್ ಸಿಎಂ ಕನಸಿನ ಬಗ್ಗೆ ಮಾತನಾಡಿದ ಸುರೇಶ್ ಗೌಡ ‘ ಪರಮೇಶ್ವರ್ ಸಿಎಂ ಕನಸಿನ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಾರೆ. ಪರಮೇಶ್ವರ್ ಸಿಎಂ ಆಗಬೇಕು ಎಂದು ತುಂಬಾ ಆಸೆ ಇಟ್ಟಿಕೊಂಡಿದ್ದಾರೆ. ಕೆಲವು ಸಮಯ ಪರ್ಸನಲ್ ಆಗಿ ಮಾತನಾಡಿದಾಗ ಅವರು ಇದನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಸುರೇಶ್ ಗೌಡ ‘ದೇವೇಗೌಡರನ್ನು ಸೋಲಿಸಿದ ಜಿ,ಎಸ್ ಬಸವರಾಜು ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ, ಆದರೆ ತುಮಕೂರಿನಲ್ಲಿ ಗೆದ್ದ ಸೋಮಣ್ಣನಿಗೆ ಸಚಿವ ಸ್ಥಾನದ ಅದೃಷ್ಟ ಒಲಿದಿದೆ. ಹಾಗೆಯೇ ಪರಮೇಶ್ವರ್ಗೂ ಅದೃಷ್ಟ ಒಲಿಯಬಹುದು ಯಾರಿಗೂ ಗೊತ್ತು ಎಂದು ಹೇಳಿದರು.