ಬಾಗಲಕೋಟೆ : ಸಮಾಜ ಎಷ್ಟೆ ಮುಂದಿವರಿಯುತ್ತಿದ್ದರು ಕೂಡ ಇನ್ನು ಹಲವು ಕಡೆ ಮೌಡ್ಯವೆಂಬುದು ತಾಂಡವವಾಡುತ್ತಿದೆ ಎಂಬುದಕ್ಕೆ ಈ ವರದಿ ಉದಾಹರಣೆಯಾಗಿದೆ. ನಿಧಿ ಆಸೆಗೆ ಬಿದ್ದ ಅತ್ತೆ-ಮಾವ ಸ್ವಂತ ಸೊಸೆಯನ್ನೆ ಜೀವಂತ ಸಮಾಧಿ ಮಾಡಲು ಮುಂದಾಗಿದ್ದು. ಸರಿಯಾದ ಸಮಯಕ್ಕೆ ಪೋಲಿಸರು ಬಂದು ಮಹಿಳೆಯ ಜೀವ ಉಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ, ಬಾದಾಮಿ ತಾಲ್ಲೂಕಿನ, ಯಂಡಿಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮುತ್ತಕ್ಕೆ ಎಂಬ ಮಹಿಳೆಯನ್ನು ಜೀವಂತವಾಗಿ ಹೂತು ಹಾಕಲು ಸಂಚು ಹೂಡಿದ್ದರು ಎಂದು ತಿಳಿದು ಬಂದಿದೆ. ನಿಧಿ ಆಸೆಗೆ ಬಿದ್ದ ಅತ್ತೆ-ಮಾವನಿಂದ ಕೃತ್ಯ ನಡೆದಿದ್ದು. ಸೊಸೆ ಮುತ್ತಕ್ಕ ಪೂಜಾರಿಯನ್ನು ಸಮಾದಿ ಮಾಡಲು ತೋಟದ ಮನೆಯಲ್ಲಿ ಗುಂಡಿ ತೋಡಿ ಸಿದ್ದತೆ ಮಾಡಿಕೊಂಡಿದ್ದರು.
ಆದರೆ ಸರಿಯಾದ ಸಮಯಕ್ಕೆ ಮುತ್ತಕ್ಕಳ ಸಂಭಂದಿಕರು ಪೋಲಿಸ್ರಿಗೆ ಕರೆ ಮಾಡಿ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಕೆರೂರು ಪೋಲಿಸರು ತೋಟದ ಮನೆಯನ್ನು ಪರಿಶೀಲಿಸಿದ್ದಾರೆ ಎಂದು ತಿಳಿದು ಬಂದಿದೆ.