ಬೆಂಗಳೂರು : ಸಾಮಾನ್ಯವಾಗಿ ಪೋಲಿಸರು ರೌಡಿಗಳಿಗೆ ಬೈಯುವುದನ್ನು ನೋಡಿರುತ್ತೇವೆ. ಆದರೆ ಬೆಂಗಳೂರಿನಲ್ಲಿ ನಡೆದ ರೌಡಿಗಳ ಸಮ್ಮೇಳನದಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಸೈಲೆಂಟ್ ಸುನೀಲ ಪೋಲಿಸರಿಗೆ ಬಾಯಿಗೆ ಬಂದ ಹಾಗೆ ಬೈಯದಿದ್ದು. ಜೊತೆಗೆ ಪೋಲಿಸರನ್ನೆ ತಳ್ಳಿ ಅವಾಜ್ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ತಿಂಗಳು ಸುನೀಲನ ಅತ್ಯಾಪ್ತ ಬಲರಾಮ ಮರಣ ಹೊಂದಿದ್ದನು. ಇವನಿಗೆ ನಮನ ಸಲ್ಲಿಸಲು ನವೆಂಬರ್ 28ರಂದು ಕಾರ್ಯಕ್ರಮ ಅಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಸೈಲೆಂಟ್ ಸುನೀಲ್, ಮಾರ್ಕೆಟ್ ವೇಡಿ, ಒಂಟೆ ರೋಹಿತ್, ಶಿವಮೊಗ್ಗ ಕಾಂತಯ್ಯ, ಸೆಂದಿಲ್ ಸೇರಿದಂತೆ ಅನೇಕ ರೌಡಿ ಶೀಟರ್ಗಳು ಮತ್ತು ಸಾಕಷ್ಟು ಪುಡಿರೌಡಿಗಳು ಸಹ ಇವರ ಜೊತೆಗೆ ಸೇರಿಕೊಂಡಿದ್ದರು.
ಕಾರ್ಯಕ್ರಮ ಆಯೋಜನೆಯ ಮಾಹಿತಿಯನ್ನು ಪಡೆದ ಸಿಸಿಬಿ ಪೋಲಿಸರು ಈ ಕಾರ್ಯಕ್ರಮಕ್ಕೆ ಹೋಗಿದ್ದರು. ಇವರನ್ನು ನೋಡಿದ್ದೇ ತಡ ಸೈಲೆಂಟ್ ಸುನೀಲ ಆಕ್ರೋಶಗೊಂಡಿದ್ದು.’ನಾನ್ ಎಲ್ಲೋದ್ರು ನನ್ ಹಿಂದೆ ಬರ್ತೀರಾ, ನಾಯಿ ತರ ಫಾಲೊ ಮಾಡ್ತೀರ’ ಎಂದು ಪೊಲೀಸರಿಗೆ ಬಾಯಿಗೆ ಬಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ವೇಳೆ ಪೋಲಿಸರು ಸೈಲೆಂಟ್ ಸುನೀಲಾನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಇದ್ಯಾವುದಕ್ಕೂ ಕೇರ್ ಮಾಡದ ಸುನೀಲಾ ಪೋಲಿಸರನ್ನೆ ಸೈಡಿಗೆ ತಳ್ಳಿ ರಾಜರೋಷವಾಗಿ ತನ್ನ ಕಾರ್ನಲ್ಲಿ ಹೊರಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಸುನೀಲಾನ ವರ್ತನೆಗೆ ಬೇಸತ್ತ ಸಿಸಿಬಿ ಪೋಲಿಸ್ ಹರೀಶ್ (ASI) ಎಂಬುವವರು ಮಲ್ಲೇಶ್ವರಂ ಪೋಲಿಸ್ ಠಾಣೆಗೆ ದೂರು ನೀಡಿದ್ದು. ದೂರು ದಾಖಲಿಸಿಕೊಂಡಿರುವ ಪೋಲಿಸರು ಸೈಲೆಂಟ್ ಸುನೀಲನ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ.