ಚಿಕ್ಕಮಗಳೂರು : ಜಾತಿ ಎಂಬುದು ಅಂಟು ರೋಗದ ರೀತಿ ಸಮಾಜದ ಎಲ್ಲಾ ವರ್ಗಗಳನ್ನು ಆವರಿಸಿಕೊಂಡಿದೆ. ಈಗ ಶವಸಂಸ್ಕಾರಕ್ಕೂ ಅಡ್ಡಿ ಮಾಡುವ ಹಂತಕ್ಕೆ ತಲುಪಿದೆ ಎಂದರೆ ನೀವು ನಂಬಲೆ ಬೇಕು. ಚಿಕ್ಕಮಗಳೂರಿನಲ್ಲಿ ದಲಿತರ ಶವ ಹೂಳಲು ಒಕ್ಕಲಿಗ ಸಮುದಾಯ ಬಿಟ್ಟಿಲ್ಲ ಎಂಬ ಮಾಹಿತಿ ದೊರೆತಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದಲ್ಲಿನ ಒಂದು ಜಾಗಕ್ಕೆ ಎರಡು ಸಮುದಾಯಗಳು ಕಿತ್ತಾಡುತ್ತಿವೆ. ಒಕ್ಕಲಿಗರು ಆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಬೇಕು ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ದಲಿತರು ಆದು ನಮ್ಮ ಸ್ಮಶಾಣ ಭೂಮಿ ಎಂದು ವಾದಿಸುತ್ತಿದ್ದಾರೆ.
ಇದೇ ಕಾರಣಕ್ಕೆ ಇಂದು ಗ್ರಾಮದಲ್ಲಿ ಭಾರಿ ಹೈಡ್ರಾಮ ಸೃಷ್ಟಿಯಾಗಿದ್ದು. ದಲಿತ ವ್ಯಕ್ತಿ ಶವಸಂಸ್ಕಾರಕ್ಕೆ ಬಿಡದ ಒಕ್ಕಲಿಗ ಸಮುದಾಯದವರು ವಿವಾದದ ಜಾಗ ನಮ್ಮದು ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶವ ಹೂಳುವ ಗುಂಡಿಗೆ ಇಳಿದ ಮೂನಾಲ್ಕು ಮಹಿಳೆಯರು ಪ್ರತಿಭಟನೆ ನಡೆಸಿದ್ದು. ಶವ ಹೂಳಲು ಬಿಡೋದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೆ ಆಲ್ದೂರು ಠಾಣಾ ಪೋಲಿಸರು ಮಧ್ಯ ಪ್ರವೇಶಿಸಿ ಶವದ ಗುಂಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯರನ್ನು ಹೊರಕ್ಕೆ ಎಳೆದು ಹಾಕಿದ್ದು. ಕೊನೆಗೆ ಅದೇ ಜಾಗದಲ್ಲಿ ಶವ ಸಂಸ್ಕಾರ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಘಟನ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.