Thursday, January 23, 2025

ಭಾರೀ ಮಳೆಗೆ ಕೊಚ್ಚಿ ಹೋಯ್ತು ಅನ್ನದಾತನ ಜೀವನ !

ಕೊಪ್ಪಳ : ಫೆಂಗಲ್ ಚಂಡಮಾರುತದಿಂದ ಅನೇಕ ಕಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಬಿಸಿಲುನಾಡು ಕೊಪ್ಪಳ ಜಿಲ್ಲೆಯ ಮೇಲೆ ಕೂಡಾ ಚಂಡುಮಾರುತದ ಪರಿಣಾಮ ಆಗಿದ್ದು, ಮಳೆಯಿಂದಾಗಿ ಭತ್ತದ ಬೆಳೆಗಾರರು ಹೈರಾಣಾಗಿದ್ದಾರೆ. ನಿನ್ನೆ ಮಧ್ಯಾಹ್ನ ಸುರಿದ ಬಾರಿ ಮಳೆಗೆ ರೈತನ ಕಣ್ಣೇದುರೆ ರಾಶಿ ಮಾಡಿದ್ದ ಭತ್ತ ಕೊಚ್ಚಿಕೊಂಡು ಹೋಗಿದೆ.

ಈಗಾಗಲೇ ಸುರಿದ ಮಳೆಯಿಂದ ಭತ್ತ ಸಂಪೂರ್ಣ ನೆಲಕಚ್ಚಿ ಹೋಗಿತ್ತು.‌ಇದೀಗ ಗಾಯದ ಮೇಲೆ ಬರೆ ಎಳೆದಂತ್ತೆ ನಿನ್ನೆ ಮಧ್ಯಾಹ್ನ ಸುರಿದ ಮಳೆ ಕಟಾವು ಮಾಡಿ‌ ಒಣಗಿಸಲು ಹಾಕಿದ್ದ ರಾಶಿ ರಾಶಿ ಭತ್ತ ರೈತನ‌ ಕಣ್ಮುಂದೆನೆ ಕೊಚ್ಚಿ ಹೋಗಿರುವ ದೃಶ್ಯ ಕರಳು ಹಿಂಡುವಂತ್ತೆ ಮಾಡಿದೆ.

ಹೌದು ರಾಜ್ಯದ ಅನ್ನದ ಬಟ್ಟಲು ಎಂದು ಕರೆಸಿಕೊಳ್ಳುವ ಕೊಪ್ಪಳ ಜಿಲ್ಲೆಯ ಗಂಗಾವತಿ ಮತ್ತು ಕಾರಟಗಿ ತಾಲೂಕಿನಾದ್ಯಂತ ಭತ್ತದ ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಶ್ರೀನಾಥ ಎನ್ನುವ ರೈತನ ಒಟ್ಟು 50 ಎಕ್ಕರೆ ಭತ್ತ ಕಟಾವು ಮಾಡಿ ಒಣಗಿಸಲು ಹಾಕಿದ್ದ ಇನ್ನೇನು ಇಂದು ಸಂಜೆ ವ್ಯಾಪಾರ ಮಾಡಿ ಖುಷಿಯಲ್ಲಿ ಇರಬೇಕಾಗಿದ್ದ ರೈತ. ನಿನ್ನೆ ಮಧ್ಯಾಹ್ನ ಯಾವುದೇ ಮುನ್ಸೂಚನೆ ಇಲ್ಲದೆ ಬಂದ ಮಳೆಗೆ ಎಲ್ಲಾ ಬೆಳೆ ನಾಶವಾಗಿದೆ.

ಕರ್ನಾಟಕದ ಭತ್ತದ ಕಣಜ ಎಂದೇ ಕರೆಯಲ್ಪಡುವ ಕೊಪ್ಪಳ ಜಿಲ್ಲೆಯಲ್ಲಿ ಸರಿಸುಮಾರು 69 ಸಾವಿರ ಹೆಕ್ಟೇರ್​​ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಭತ್ತವನ್ನು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಈ ಬಾರಿ ಮಳೆ ಮತ್ತು ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಉತ್ತಮ ಬೆಳೆ ಕೂಡಾ ಬಂದಿದೆ. ಆದರೆ ಈಗಾಗಲೇ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ಭತ್ತದ ಬೆಳೆಗಾರರಿಗೆ ಇದೀಗ ಫೆಂಗಲ್ ಚಂಡಮಾರುತದ ಮಳೆಯ ಕಾಟ ಆರಂಭವಾಗಿದೆ. ನಿನ್ನೆ ಸುರಿದ ಮಳೆಗೆ ಅಲ್ಪಸ್ವಲ್ಪ ಉಳಿದಿದ್ದ ಬೆಳೆಯೂ ಸಹ ಮಳೆಯ ಹರಿಯುವ ನೀರಿಗೆ ಕೊಚ್ಚಿಹೋಗಿದೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ನಾಳೆ ನೆಡೆಯುವ ಕೆಡಿಪಿ‌ ಸಭೆಯಲ್ಲಿ ಡಿಸಿಯವರೊಂದಿಗೆ ಚರ್ಚಿಸಿ ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನ‌ ಮಾಡ್ತಿನಿ ಎಂದಿದ್ದಾರೆ.

 

 

RELATED ARTICLES

Related Articles

TRENDING ARTICLES