Sunday, January 19, 2025

ಸ್ಲೋ ಬೌಲಿಂಗ್’ ಎಂದು ಕೆಣಕಿದ ಜೈಸ್ವಾಲ್ ಕುರಿತು ಮಿಚೆಲ್ ಸ್ಟಾರ್ಕ್ ಹೇಳಿದ್ದೇನು?

ಪರ್ಥ್​ : ಪರ್ತ್ ಟೆಸ್ಟ್ ಪಂದ್ಯದ ನಡುವೆ ಟೀಮ್ ಇಂಡಿಯಾದ ಯುವ ಪ್ರತಿಭಾವಂತ ಎಡಗೈ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ತೆಗಳಿಕೆ ಕುರಿತು ಮೊದಲ ಬಾರಿ ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್‌ ಮೌನ ಮುರಿದಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದ ವೇಳೆ ಸಾರ್ಕ್ ಅವರನ್ನು ಕೆಣಕಿದ್ದ ಜೈಸ್ವಾಲ್, ‘ನೀನು ತುಂಬಾ ಸ್ತೋ ಬೌಲಿಂಗ್ (ನಿಧಾನಗತಿಯಲ್ಲಿ) ಮಾಡುತ್ತೀಯಾ’ ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಟಾರ್ಕ್, ‘ಪರ್ತ್ ಪಂದ್ಯದಲ್ಲಿ ಜೈಸ್ವಾಲ್ ಅವರ ಮಾತುಗಳು ಕೇಳಿಸಿರಲಿಲ್ಲ’ ಎಂದು ಹೇಳಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಜೈಸ್ವಾಲ್‌ ದ್ವಿತೀಯ ಇನಿಂಗ್ಸ್‌ನಲ್ಲಿ ಅಮೋಘ ಶತಕ (161) ಗಳಿಸಿದ್ದರು. ಆ ಮೂಲಕ ಅಸ್ಟ್ರೇಲಿಯಾ ನೆಲದಲ್ಲಿ ಆಡಿದ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು. ಅಲ್ಲದೆ ಭಾರತದ 295 ರನ್ ಅಂತರದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

22 ವರ್ಷದ ಯುವ ಆಟಗಾರನ ಕೆಚ್ಚೆದೆಯ ಆಟದ ಜತೆಗೆ ಸ್ಟಾರ್ಕ್ ಅವರನ್ನು ಸೆಡ್ಜಿಂಗ್ ಮಾಡಿರುವುದು ಭಾರತ ಸೇರಿದಂತೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಹೆಚ್ಚಿನ ಸದ್ದು ಮಾಡಿತ್ತು. ಶರವೇಗದಲ್ಲಿ ಬೌಲಿಂಗ್ ಮಾಡುವ ಅದರಲ್ಲೂ ಆಸ್ಟ್ರೇಲಿಯಾದ ನೆಲದಲ್ಲೇ ಸ್ಟಾರ್ಕ್ ಅವರನ್ನು ‘ಸ್ಲೋ ಬೌಲಿಂಗ್’ ಎಂದು ಕೆಣಕುವ ಮೂಲಕ ಜೈಸ್ವಾಲ್ ದಿಟ್ಟತನದ ಜತೆಗೆ ಉಜ್ವಲ ಭವಿಷ್ಯದ ಸಂದೇಶ ಸಾರಿದ್ದಾರೆ ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯಪಟ್ಟಿದ್ದರು.

ಹಾಗಿದ್ದರೂ ಭಾರತೀಯ ಯುವ ಆಟಗಾರನ ಕುರಿತು ಮಿಚೆಲ್ ಸ್ಟಾರ್ಕ್ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಜೈಸ್ವಾಲ್ ‘ಫಿಯರ್‌ಲೆಸ್‌ ಯುವ ಕ್ರಿಕೆಟಿಗ’ ಎಂದು ಕೊಂಡಾಡಿದ್ದಾರೆ. ‘ನಿಜವಾಗಿಯೂ ಜೈಸ್ವಾಲ್ ಹೇಳಿರುವುದನ್ನು ನಾನು ಕೇಳಿಸಿರಲಿಲ್ಲ. ಈಗ ನಾನು ಹೆಚ್ಚೇನು ಕೆಣಕಲು ಹೋಗುವುದಿಲ್ಲ. ಬಹುಶಃ ಹಿಂದೆ ಜಾಸ್ತಿ ಮಾಡುತ್ತಿದ್ದೆ’ ಎಂದು ನಗುಮುಖದಿಂದಲೇ ಸ್ಟಾರ್ಕ್ ಉತ್ತರಿಸಿದ್ದಾರೆ.

RELATED ARTICLES

Related Articles

TRENDING ARTICLES