Sunday, January 19, 2025

ಮರ ಕಡಿದ ಆರೋಪ : ಟಾಕ್ಸಿಕ್​ ಸಿನಿಮಾ ತಂಡದ ವಿರುದ್ದದ ಎಫ್​ಐಆರ್​ಗೆ ತಡೆ ನೀಡಿದ ಹೈಕೋರ್ಟ್​ !

ಬೆಂಗಳೂರು: ಟಾಕ್ಸಿಕ್​ ಸಿನಿಮಾದ ಸೆಟ್​ ನಿರ್ಮಾಣ ಮಾಡಲು ಮರ ಕಡಿದ ಆರೋಪ ಎದುರಿಸುತ್ತಿದ್ದ ಟಾಕ್ಸಿಕ್​ ಸಿನಿಮಾ ತಂಡಕ್ಕೆ ಹೈಕೋರ್ಟ್​ ರಿಲೀಫ್​ ನೀಡಿದ್ದು. ನಿರ್ಮಾಪಕರ ವಿರುದ್ದ ದಾಖಲಿಸಿದ್ದ ಎಫ್​ಐಆರ್​ಗೆ ಹೈಕೋರ್ಟ್​ ತಡೆ ನೀಡಿ ಆದೇಶ ಹೊರಡಿಸಿದೆ.

ಸಿನಿಮಾ ತಂಡದ ವಿರುದ್ದ ಇರುವ ಆರೋಪವೇನು !

1963 ರಲ್ಲಿ ರಾಜ್ಯ ಸರ್ಕಾರ ಹೆಚ್​​ಎಂಟಿಗೆ ಸುಮಾರು 400 ಎಕರೆ ಜಮೀನನ್ನು ನೀಡಿತ್ತು. ಇದರಲ್ಲಿನ 18 ಎಕರೆ ಜಮೀನನ್ನು ಹೆಚ್​ಎಂಟಿ, ಕೆನಾರಾ ಬ್ಯಾಂಕ್​ಗೆ ಮಾರಾಟ ಮಾಡಿತ್ತು. ಇದೇ ಭೂಮಿಯಲ್ಲಿ ಟಾಕ್ಸಿಕ್​ ಚಿತ್ರತಂಡ ಸುಮಾರು 30 ಕೋಟಿ ಹಣವನ್ನು ಹೂಡಿಕೆ ಮಾಡಿ ಸಿನಿಮಾ ಸೆಟ್​ ಹಾಕಿದ್ದರು.

ಈ ಭೂಮಿಯಲ್ಲಿ ಅರಣ್ಯವನ್ನು ಕಡೆದು ಸೆಟ್​ ನಿರ್ಮಿಸಿದ್ದಾರೆ ಎಂದು ಟಾಕ್ಸಿಕ್​ ಚಿತ್ರತಂಡದ ನಿರ್ಮಾಪಕರ ವಿರುದ್ದ ದೂರು ದಾಖಲಿಸಲಾಗಿತ್ತು. ಈ ಜಾಗಕ್ಕೆ ಅರಣ್ಯ ಸಚಿವ ಈಶ್ವರ್​ ಖಂಡ್ರೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಸರ್ಕಾರ ಸುಪ್ರಿಂ ಕೋರ್ಟ್​ಗೆ ಈ ಭೂಮಿ ಅರಣ್ಯ ಪ್ರದೇಶವಲ್ಲ ಎಂದು ಹೇಳಿದ್ದರಿಂದ. ಇಂದು ನ್ಯಾ.ಎಂ ನಾಗಪ್ರಸನ್ನರ ಪೀಠ ಎಫ್​ಐಆರ್​ಗೆ ತಡೆ ನೀಡಿ ಆದೇಶಿಸಿದೆ.

RELATED ARTICLES

Related Articles

TRENDING ARTICLES