Monday, December 23, 2024

ಪುಷ್ಪ 2 ರಿಲೀಸ್​​ : ಸಿನಿಮಾ ತುಂಬಾ ಲ್ಯಾಗ್​ ಆಯ್ತು ಎನ್ನುತ್ತಿರೋ ಫ್ಯಾನ್ಸ್ ​​!

ಬೆಂಗಳೂರು(ಡಿ.05) : ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಇಂದು ಬಿಡುಗಡೆಯಾಗಿದ್ದು. ಅಲ್ಲುಅರ್ಜುನ್​ ಮತ್ತು  ಸುಕುಮಾರ್​ ಜೋಡಿ ತೆರೆ ಮೇಲೆ ಕಮಾಲ್​ ಮಾಡಲು ಸಿದ್ದತೆ ಮಾಡಿಕೊಂಡಿದೆ. ​ನೆನ್ನೆ ರಾತ್ರಿಯಿಂದಲೆ ಪುಷ್ಪ ಸಿನಿಮಾದ ವಿಶೇಷ ಪ್ರದರ್ಶನಗಳು ಆರಂಭವಾಗಿದ್ದು. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ.

ಪುಷ್ಪ ಪಾರ್ಟ್​ 1 ಬಿಡುಗಡೆಯ ನಂತರ ಅಲ್ಲು ಅರ್ಜುನ್​ ಅಭಿಮಾನಿಗಳು ಯಾವಾಗ ಪಾರ್ಟ್​ 2 ಬಿಡುಗಡೆಯಾಗುತ್ತದೆ ಎಂದು ತುದಿಗಾಲಲ್ಲಿ ನಿಂತು ಕಾಯುತ್ತಿದ್ದರು. ಕೊನೆಗು ಪುಷ್ಪ ಪಾರ್ಟ್​ 2 ಸಿನಿಮಾ ಇಂದು ವರ್ಲ್ಡ್​​ ವೈಡ್​​ ಬಿಡುಗಡೆಗೊಂಡಿದ್ದು ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬರಲು ಆರಂಭವಾಗಿದೆ.

ಕಂಪ್ಲೀಟ್​ ಮಾಸ್​​ ಆ್ಯಕ್ಷನ್​ ಸಿನಿಮಾ ಆಗಿರುವ ಪುಷ್ಪ ಸುಮಾರು 3 ಗಂಟೆ 20 ನಿಮಿಷದ ದೊಡ್ಡ ಅವದಿಯನ್ನು ಹೊಂದಿದೆ. ಇದರಿಂದಾಗಿ ಅಭಿಮಾನಿಗಳಿಗೆ ನಿರಾಸೆಯಾಗಿದ್ದು. ಸಿನಿಮಾ ತುಂಬಾ ಲ್ಯಾಗ್​ ಆಗಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಬಿಟ್ಟರೆ ಸಿನಿಮಾದಲ್ಲಿ ಅಲ್ಲುಅರ್ಜುನ್​ ಮತ್ತು ರಶ್ಮಿಕಾ ಜೋಡಿ ಕಮಾಲ್​ ಮಾಡಿದ್ದು. ಚಿತ್ರದ ಬಗ್ಗೆ ಅಭಿಮಾನಿಗಳು ಸಕರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಪುಷ್ಪ ಸಿನಿಮಾದ ಅರ್ಲಿ ಮಾರ್ನಿಂಗ್​ ಶೋಗಳಿಗೆ ಜಿಲ್ಲಾಧಿಕಾರಿ ತಡೆ ನೀಡಿದ್ದು. ಸಮಯ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರ ಜೊತೆಗೆ ಸಿನಿಮಾದ ಟಿಕೆಟ್​ ಬೆಲೆಯು ದುಬಾರಿಯಾಗಿದ್ದು. ಇದು ಕೂಡ ಚಿತ್ರದ ಬಗ್ಗೆ ಜನರು ನಿರಾಸಕ್ತಿ ತಳೆಯಲು ಕಾರಣವಾಗಿದೆ ಎಂದು ಹೇಳಬಹುದು.

RELATED ARTICLES

Related Articles

TRENDING ARTICLES