ಹಾಸನ : ನಗರದ ಹೊರವಲಯದ ಎಸ್.ಎಂ.ಕೃಷ್ಣನಗರದಲ್ಲಿ ಜನಕಲ್ಯಾಣ ಸಮಾವೇಶ ನಡೆಯುತ್ತಿದ್ದು. ಸಮಾವೇಶ ಹಿನ್ನಲೆ ಸಾವಿರಾರು ಜನರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಹಾಸನದಲ್ಲಿ ಸುಮಾರು 4 ಕಿ.ಮೀ ಟ್ರಾಫಿಕ್ ಜಾಮ್ ಆಗಿದ್ದು. ಸಮಾವೇಶಕ್ಕೆ ಜನರು ತೆರಳಲಾಗದೆ ಪರದಾಡುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.
ಹಾಸನ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು. ಜನರನ್ನು ಕರೆತರಲು ನೂರಾರು ಬಸ್ಗಳನ್ನು ಬಳಸಲಾಗಿದೆ. ಇದರ ಪರಿಣಾಮವಾಗಿ ಹಾಸನದ ಡೈರಿ ವೃತ್ತದಿಂದ ಎಸ್ಎಂ ಕೃಷ್ಣನಗರದವರೆಗು ಟ್ರಾಫಿಕ್ ಜಾಮ್ ಉಂಟಾಗಿದ್ದು. ಸುಮಾರು 500ಕ್ಕೂ ಹೆಚ್ಚು ಬಸ್ಗಳು ಟ್ರಾಫಿಕ್ನಲ್ಲಿ ಸಿಲುಕಿವೆ ಎಂದು ಮಾಹಿತಿ ದೊರೆತಿದೆ. ಟ್ರಾಫಿಕ್ ಪರಿಣಾಮವಾಗಿ ಜನರು ಸಮಾವೇಶಕ್ಕೆ ತೆರಳಲು ಸಾಧ್ಯವಾಗದೆ ಬಸ್ನಲ್ಲೆ ಕಾಲ ಕಳೆಯುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.