Wednesday, January 22, 2025

ಬಾವಿಗೆ ಬಿದ್ದ ಹಸುವನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿಗಳು !

ದಾವಣಗೆರೆ : ತೋಟದಲ್ಲಿ ಮೇಯುತ್ತಿದ್ದ ವೇಳೆ ಹಸುವೊಂದು ನೀರಿನಲ್ಲಿ ಬಿದ್ದು ಮೇಲೆ ಬರಲು ಆಗದೆ ಪರದಾಡುತ್ತಿದ್ದ ಹಸುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲೆ ಎತ್ತುವಲ್ಲಿ ಸಫಲರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

ದಾವಣಗೆರೆ ನಗರದ ಹೊರ ವಲಯದ ಆವರಗೆರೆಯಲ್ಲಿ ಘಟನೆ ನಡೆದಿದ್ದು. ಗುಂಡಿ ಪುಷ್ಪಾ ಸಿದ್ದೇಶ್ ಅವರಿಗೆ ಸೇರಿದ ಹಸು ತೋಟದಲ್ಲಿ ಮೇಯುತ್ತಿದ್ದ ವೇಳೆ ಆಯತಪ್ಪಿ ಬಾವಿಗೆ ಬಿದ್ದಿದೆ. ಅಲ್ಲೆ ಕೆಲಸ ಮಾಡುತ್ತಿದ್ದ ಕೆಲಸಗಾರರು ಇದನ್ನು ನೋಡಿದ್ದು. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ತುರ್ತು ಸೇವಾ ಠಾಣೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿಗಳು ಹಸುವನ್ನು ಬಾವಿಯಿಂದ ಮೇಲೆತ್ತುವಲ್ಲಿ ಸಫಲರಾಗಿದ್ದು. ಸಹಾಯಕ ಅಗ್ನಿಶಾಮಕ ಅಧಿಕಾರಿ ಭೀಮರಾವ್​ ಉಪ್ಪಾರ್​ ನೇತೃತ್ವದ ತಂಡ ಹಸುವನ್ನು ಮೇಲೆತ್ತುವಲ್ಲಿ ಸಫಲರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES