Wednesday, January 15, 2025

ಫಡ್ನವೀಸ್​ ಪಟ್ಟಾಭೀಷೇಕ : ಪ್ರಮಾಣ ವಚನಕ್ಕೆ ಅಂಬಾನಿ ಸೇರಿದಂತೆ ಬಾಲಿವುಡ್​ ಚಿತ್ರರಂಗ ಹಾಜರ್​

ಮುಂಬೈ: ಕಳೆದ 13 ದಿನಗಳಿಂದ ಮಹರಾಷ್ಟ್ರದ ರಾಜಕೀಯ ದೇಶದ ಕುತೂಹಲ ಕೆರಳಿಸಿದ್ದು. ಸಿಎಂ ಯಾರಾಗುತ್ತಾರೆ ಎಂಬ ಪ್ರಶ್ನೆಗೆ ಅಧಿಕೃತವಾಗಿ ತೆರೆಬಿದ್ದಿದೆ. ಬಿಜೆಪಿಯ ದೇವೇಂದ್ರ ಫಡ್ನವೀಸ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು. ಶಿವಸೇನೆಯ ಏಕನಾಥ್​ ಶಿಂದೆ ಮತ್ತು ಎನ್​ಸಿಪಿಯ ಅಜಿತ್​ ಪವಾರ್​ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಮುಂಬೈನ ಅಜಾದ್ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಉದ್ಯಮಿ ಮುಖೇಶ್​ ಅಂಭಾನಿ ಸೇರಿದಂತೆ ಅನೇಕ ಇಡೀ ಬಾಲಿವುಡ್​ ಚಿತ್ರರಂಗ ಹಾಜರಾಗಿದ್ದು. ಶಾರುಖ್​ ಖಾನ್​, ಸಲ್ಮಾನ್​ ಖಾನ್​, ರಣಬೀರ್​ ಸಿಂಗ್​, ರಣನೀರ್​ ಕಪೂರ್​ ಸೇರಿದಂತೆ ಅನೇಕ ಚಿತ್ರರಂಗದ ಗಣ್ಯರು ಹಾಜರಾಗಿದ್ದರು. ಅದರ ಜೊತೆಗೆ ಕ್ರೀಡಾ ತಾರೆ ಸಚಿನ್​ ತೆಂಡುಲ್ಕರ್​ ಸೇರಿದಂತೆ ಗಣ್ಯರು ಆಗಮಿಸಿದರು.

ರಾಜಕೀಯ ಗಣ್ಯರ ದಂಡೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಿದ್ದು. ಮುಂಬೈನ ಅಜಾದ್​ ಮೈದಾನದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಅಮಿತ್ ಶಾ, ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಯೋಗಿ ಆದಿತ್ಯನಾಥ್​, ನಿತಿಶ್​ ಕುಮಾರ್​ ಸೇರಿದಂತೆ ಇಡೀ ಕ್ಯಾಬಿನೆಟ್​ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

 

RELATED ARTICLES

Related Articles

TRENDING ARTICLES