ಹಾಸನ: ಹಾಸನದ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ‘ ಯಾರು ಕೂಡ ತಲೆಕೆಡಿಸಿಕೊಳ್ಳಬೇಡಿ. ಈ ಬಂಡೆ ಸಿದ್ದರಾಮಯ್ಯನ ಜೊತೆ ಯಾವಗಲೂ ಇರ್ತಿನಿ. ಈಗಲೂ ಇರ್ತಿನಿ, ಮುಂದೆಯು ಇರ್ತಿನಿ, ಸಾಯೋವರೆಗು ಇರ್ತಿನಿ ಎಂದು ಹೇಳಿದರು.
ಮುಖ್ಯಮಂತ್ರಿಯಾಗುವ ವಿಚಾರದಲ್ಲಿ ಒಪ್ಪಂದವಾಗಿದೆ ಎಂದು ಹೇಳಿದ್ದ ಡಿಕೆ. ಶಿವಕುಮಾರ್ ಹೇಳಿಕೆಯಿಂದ ರಾಜ್ಯ ಕಾಂಗ್ರೆಸ್ನಲ್ಲಿ ಬಿರುಗಾಳಿ ಸೃಷ್ಟಿಯಾಗಿತ್ತು. ಆದರೆ ಇದಕ್ಕೆ ಡಿ.ಕೆ ಶಿವಕುಮಾರ್ ಇಂದು ಪರೋಕ್ಷವಾಗಿ ಸಮಜಾಯಿಶಿ ನೀಡಿದ್ದು. ಸಾಯೊವರೆಗು ಸಿದ್ದರಾಮಯ್ಯನ ಜೊತೆ ಇರುತ್ತೇನೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಡಿ.ಕೆ ಶಿವಕುಮಾರ್ ‘ ಈ ಡಿ.ಕೆ ಎಲ್ಲಿ ಇರುತ್ತೀನೋ ಅಲ್ಲಿ ಪ್ರಾಮಾಣಿಕವಾಗಿ ಇರುತ್ತೇನೆ. ಹಾಸನದ ಜನ 25 ವರ್ಷಗಳ ಬಳಿಕ ಸಂಸದರನ್ನ ಅಯ್ಕೆ ಮಾಡಿದಾರೆ. ನಮ್ಮ ಸರ್ಕಾರ ಹೆಚ್ಚು ಸುಭದ್ರವಾಗಿದೆ. ನಮ್ಮ ಸರ್ಕಾರದ ಶಕ್ತಿ ನೂರೆಂಟು, ನಮ್ಮ ಗ್ಯಾರಂಟಿ ಪರ್ಮನೆಂಟು ಎಂದು ಪ್ರಾಸಬದ್ದವಾಗಿ ಮಾತನಾಡಿದರು.
ದೇವೇಗೌಡರ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಬಂಡೆ !
ಕುಮಾರಸ್ವಾಮಿ ಮತ್ತು ದೇವೇಗೌಡ ಕುಟುಂಬದಿಂದ ಹಾಸನದ ಹೆಣ್ಣುಮಕ್ಕಳು ನೋವು ತಿಂದಿದಾರೆ.
ಆ ತಾಯಂದಿರ ಸ್ವಾಭಿಮಾನ ಉಳಿಸಲು ಈ ಸಮಾವೇಶ ಮಾಡುತ್ತಿದ್ದೇವೆ. ಕಾಂಗ್ರೆಸ್ ಬೆಂಬಲದಿಂದ ದೇವೇಗೌಡರು ಪ್ರದಾನಿ ಆದರು, ಅದೇ ರೀತಿ ಕುಮಾರಸ್ವಾಮಿ ಕೂಡ ಸಿಎಂ ಆದರು. ಕಾಂಗ್ರೆಸ್ ಮನಮೋಹನ್ ಸಿಂಗ್, ಇಂದಿರಾ ಗಾಂದಿ ಕಾಲದಲ್ಲಿ ಸಾಕಷ್ಟು ಯೊಜನೆ ಕೊಟ್ಟಿದ್ದು.ಸಿದ್ದರಾಮಯ್ಯ ಭಾಗ್ಯಗಳ ಸರದಾರ ಎನಿಸಿಕೊಂಡಿದ್ದಾರೆ. ವೀರಪ್ಪ ಮೊಯ್ಲಿ, ಎಸ್ ಎಂ ಕೃಷ್ಣ ಸರ್ಕಾರ ಕೂಡ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆ ದೇವೇಗೌಡರು ಬಂದು ಕಣ್ಣೀರ ಹಾಕಿದರು ಕೂಡ ಜನ ಅವರನ್ನು ತಿರಸ್ಕರಿಸಿದ್ದಾರೆ. ಇನ್ನು ಹಾಸನದ ಸಂಸದನ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ನಾವು ದೇವೇಗೌಡರ ರೀತಿ ಭಾವನೆ ಮೇಲೆ ರಾಜಕಾರಣ ಮಾಡಲ್ಲ. ನಾವು ಜನರ ಬದುಕಿನ ಆಧಾರದ ಮೇಲೆ ರಾಜಕಾರಣ ಮಾಡುತ್ತೇವೆ. ತಾತ ಪ್ರಧಾನಿಯಾದರು, ಅವರ ಮಗ ಸಿಎಂ ಆದರೂ ರಾಜ್ಯದ ಜನ ನಿಮ್ಮನ್ನು ಒಪ್ಪಿಕೊಂಡಿಲ್ಲ. ದೇವೇಗೌಡರು ರಾಜ್ಯ ಸರ್ಕಾರವನ್ನು ಕಿತ್ತು ಎಸಿತಿನಿ ಎಂದು ಹೇಳುತ್ತಾರೆ. ಆದರೆ ಕಿತ್ತು ಎಸೆಯೋಕೆ ನಮ್ಮದು ಆಲೂಗೆಡ್ಡೆ, ಕಡಲೆ ಕಾಯಿ ಗಿಡ ಅಲ್ಲ. ನಮ್ಮ ಸರ್ಕಾರವನ್ನು ಕಿತ್ತಾಕುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ ಎಂದು ಹೇಳಿದರು.