Saturday, January 18, 2025

ಸಾಲ ಮರುಪಾವತಿಸದ ಹಿನ್ನಲೆ, ಶಾಲೆಗೆ ಬೀಗ ಹಾಕಿದ ಬ್ಯಾಂಕ್ !

ಮಂಡ್ಯ: ಸಾಲ ಮರುಪಾವತಿಸದ ಹಿನ್ನಲೆ ಬ್ಯಾಂಕ್​ ಸಿಬ್ಬಂದಿಗಳು ಶಾಲೆಯಲ್ಲಿದ್ದ ಮಕ್ಕಳನ್ನು ಹೊರಕ್ಕೆ ಕಳಿಸಿ ಶಾಲೆಗೆ ಬೀಗ ಜಡಿದಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದ್ದು. ಪ್ರತಿಷ್ಟಿತ ಕೇಂಬ್ರಿಡ್ಜ್​ ಶಾಲೆಗೆ ಬೀಗ ಹಾಕಿದ್ದಾರೆ ಎಂದು ಮಾಹಿತಿ ದೊರೆತಿದೆ.

ಶ್ರೀರಂಗಪಟ್ಟಣ ತಾಲೂಕಿನ ಕೂಡಲಕುಪ್ಪೆ ಗೇಟ್ ಬಳಿ ಇರುವ ಕೇಂಬ್ರಿಡ್ಜ್ ಖಾಸಗಿ ಶಾಲೆಗೆ ಬೀಗ ಹಾಕಿದ್ದು. ಸಾಲ ಪಡೆದುಕೊಂಡು ಅದನ್ನು ಹಿಂತಿರುಗಿಸದ ಹಿನ್ನಲೆ ಬ್ಯಾಂಕ್​ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ.

ಕಾಂಗ್ರೆಸ್ ಮುಖಂಡ ಹರಳಹಳ್ಳಿ ವಿಶ್ವನಾಥ್ ಒಡೆತನ ಪ್ರತಿಷ್ಟಿತ ಖಾಸಗಿ ಶಾಲೆಯಾಗಿದ್ದು. ವಿಶ್ವನಾಥ್​ರವರು ಡಿ.ಕೆ ಶಿವಕುಮಾರ್​ರೊಂದಿಗು ಆಪ್ತರೆಂದು ಮಾಹಿತಿ ದೊರೆತಿದೆ. ಬ್ಯಾಂಕ್​ನಿಂದ ಸಾಲ ಪಡೆದಿದ್ದ ಹಿನ್ನಲೆ ಈ ಹಿಂದೆಯೂ ಬ್ಯಾಂಕ್ ಸಿಬ್ಬಂದಿಗಳು ಶಾಲೆಗೆ ಬೀಗ ಹಾಕಿದ್ದರು. ಆದರೆ ಸಮಯವಾಕಾಶ ಕೇಳಿದ್ದ ಹಿನ್ನಲೆ ಬ್ಯಾಂಕ್​​ ಸಿಬ್ಬಂದಿಗಳು ಶಾಲೆಯನ್ನು ತೆರೆಯಲು ಅವಕಾಶ ನೀಡಿದ್ದರು.

ಆದರೆ ಶಾಲಾ ಆಡಳಿತ ಮಂಡಳಿ ಸರಿಯಾದ ಸಮಯಕ್ಕೆ ಸಾಲವನ್ನು ಹಿಂತಿರುಗಿಸದ ಹಿನ್ನಲೆ, ಶನಿವಾರ ಬ್ಯಾಂಕ್ ಸಿಬ್ಬಂದಿಗಳು ಪೋಲಿಸರೊಂದಿಗೆ ಬಂದು ಶಾಲೆಯ ಮಕ್ಕಳನ್ನು ತರಗತಿಗಳಿಂದ ಹೊರಕ್ಕೆ ಕಳಿಸಿ ಶಾಲೆಗೆ ಬೀಗ ಹಾಕಿದ್ದು. ಶಾಲೆಯ ಗೇಟ್​ ಮೇಲೆ ನೋಟಿಸ್​ ಅಂಟಿಸಿದ್ದಾರೆ.

ಮತ್ತೊಂದಡೆ ಲಕ್ಷಾಂತರ ರೂಪಾಯಿ ಫೀಸ್​ ಕಟ್ಟಿರುವ ಪೋಷಕರು ಆತಂಕದಲ್ಲಿ ಮುಳುಗಿದ್ದು. ಶಾಲಾ ಆಡಳಿತ ಮಂಡಳಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಹಾಗೂ ರಾಜ್ಯ ಶಿಕ್ಷಣ ಇಲಾಖೆ ಇದರಲ್ಲಿ ಮಧ್ಯಪ್ರವೇಶಿಸಿ  ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES