ಚಿಕ್ಕೋಡಿ : ಪ್ರೀತಿಸಿದ ಹುಡುಗಿಯನ್ನು ಮದುವೆ ಮಾಡಿಕೊಡಲು ಒಪ್ಪದ ಹಿನ್ನಲೆ ಆಕ್ರೋಶಗೊಂಡ ಯುವಕನೊಬ್ಬ ಹುಡುಗಿಯ ತಾಯಿನ ಮತ್ತು ಆಕೆಯ ಸಹೋದರನನ್ನೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಮೃತರನ್ನು 42 ವರ್ಷದ ಮಂಗಲ ನಾಯಿಕ ಮತ್ತು 18 ವರ್ಷದ ಪ್ರಜ್ವಲ್ ನಾಯಿಕ ಎಂದಯ ಗುರುತಿಸಿಲಾಗಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದಲ್ಲಿ ಘಟನೆ ನಡೆದಿದ್ದು. ಮಂಗಲ ನಾಯಿಕರ ಮಗಳಾದ ಪ್ರಾಜಕ್ತಾರನ್ನು ಮದುವೆ ಮಾಡಿಕೊಡಿ ಎಂದು ಆರೋಪಿ ರವಿ ಕಾಡಿಸುತ್ತಿದ್ದನು. ಆದರೆ ಇದಕ್ಕೆ ಮೃತ ಮಂಗಲ ಮತ್ತು ಆಕೆಯ ಮಗ ಪ್ರಜ್ವಲ್ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕ್ರೋದಗೊಂಡಿದ್ದ ರವಿ ನೆನ್ನೆ ರಾತ್ರಿ 10 ಗಂಟೆಗೆ ಮಂಗಲ ಮತ್ತು ಪ್ರಜ್ವಲ್ ಮೇಲೆ ಹಲ್ಲೆ ಮಾಡಿದ್ದು. ಕಬ್ಬಿಣದ ರಾಡ್ನಿಂದ ಮನಸೋ ಇಚ್ಚೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಮಾಹಿತಿ ದೊರೆತಿದೆ.
ಕೊಲೆಯಾದ ಕೆಲವೇ ಗಂಟೆಗಳಲ್ಲಿ ನಿಪ್ಪಾಣಿ ಪೋಲಿಸರು ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದು. ರವಿ ಮತ್ತು ಪ್ರಾಜಕ್ತಾಳನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.