Sunday, January 19, 2025

ಯತ್ನಾಳ್​ ಕೂಡ ನಮ್ಮವರೆ, ಜೊತೆಯಾಗಿರುವ ಪ್ರಯತ್ನ ಮಾಡುತ್ತೇವೆ : ಬಿ.ಎಸ್​​.ಯಡಿಯೂರಪ್ಪ

ಶಿವಮೊಗ್ಗ: ನಗರದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್​.ಯಡಿಯೂರಪ್ಪ. ಯತ್ನಾಳ್ ಏನು ಹೊರಗಿನವರಲ್ಲ, ಅವರು​ ಕೂಡ ನಮ್ಮ ಪಕ್ಷದವರೆ. ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿದ್ದಾರೆ, ಆದರೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕೆನ್ನುವುದು  ನನ್ನ ಅಪೇಕ್ಷೆ ಎಂದು ಹೇಳಿದರು.

ಯತ್ನಾಳ್​ ವಿಚಾರವಾಗಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ‘ಯತ್ನಾಳ್​ ಕೂಡ ನಮ್ಮ ಪಕ್ಷದವರೆ, ಯಾವುದೋ ಕಾರಣಕ್ಕೆ ಆಕ್ರೋಶದಲ್ಲಿದ್ದಾರೆ. ಆದರೆ ಇದೆಲ್ಲವನ್ನು ಮರೆತು ಎಲ್ಲರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುವುದು ನನ್ನ ಅಪೇಕ್ಷೆ. ಕೇವಲ ನನ್ನದಷ್ಟೆ ಅಲ್ಲ ವಿಜಯೇಂದ್ರ, ರಾಘವೇಂದ್ರದು ಇದೆ ಅಪೇಕ್ಷೆಯಿದೆ.

ಏನೇ ವಿಚಾರ ಬಂದರು ಎದುರು ಬದುರು ಕುತೂ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕು ಎಂಬುದು ನನ್ನ ಅಭಿಪ್ರಾಯ ಮತ್ತು ಇದಕ್ಕೆ ಎಲ್ಲರು ಸಹಕರಿಸುತ್ತಾರೆ ಎಂಬ ನಂಬಿಕೆ ಇದೆ. ಯತ್ನಾಳ್​ ಏನೇ ಹೇಳಿದರು ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗಬೇಕೆನ್ನುವುದು ನಮ್ಮ ಪ್ರಾಮಾಣಿಕ ಪ್ರಯತ್ನ ಎಂದು ಹೇಳಿದರು.

ಅಧಿವೇಶನದ ಸಿದ್ದತೆ ಬಗ್ಗೆ ಯಡಿಯೂರಪ್ಪನವರ ಮಾತು !

ಚಳಿಗಾಲದ ಅಧಿವೇಶನದ ಬಗ್ಗೆ ಮಾತನಾಡಿದ ಯಡುಯೂರಪ್ಪ ‘ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ರಾಜ್ಯ ಸರ್ಕಾರದ ದೌರ್ಬಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ನಮ್ಮೆಲ್ಲಾ ಶಾಸಕರು ಮಾಡಲಿದ್ದಾರೆ. ಸರ್ಕಾರದ ವೈಫಲ್ಯ ಹಾಗೂ ಕೊರತೆಗಳ ಬಗ್ಗೆ ಜನರ ಗಮನಕ್ಕೆ ತರುವ ಕೆಲಸ ನಮ್ಮ ಶಾಸಕರೆಲ್ಲರೂ ಮಾಡುತ್ತಾರೆ.
ಮುಡಾ ಸೇರಿದಂತೆ ಹಲವಾರು ಹಗರಣಗಳು ಈ ಸರ್ಕಾರದಲ್ಲಿದೆ. ಈ ಬಗ್ಗೆ ಮಾದ್ಯಮಗಳೇ ತಿಳಿಸಿದ್ದಿರಾ. ಒಮ್ಮೆ ಅಪರಾಧ ಮಾಡಿದ ಮೇಲೆ ಸೈಟ್ ಗಳನ್ನು ವಾಪಾಸ್ ನೀಡೋದು ಬೇರೆ ವಿಷಯ. ಆದರೆ ಸಾವಿರಾರು ಸೈಟ್ ಗಳು ಕಾನೂನು ಬಾಹಿರವಾಗಿ ನೀಡಿದ್ದಾರೆಂಬ ಅಂಶ ತಿಳಿದು ಬಂದಿದೆ. ಈ ಬಗ್ಗೆ ಇ.ಡಿ. ಯವರು ಪುರಾವೆ ಇಲ್ಲದೇ ಮಾತನಾಡುವುದಿಲ್ಲ. ಎಂದು ಹೇಳಿದರು.

 

RELATED ARTICLES

Related Articles

TRENDING ARTICLES