Thursday, December 5, 2024

ರಾಗಿ ಖರೀದಿ ನೊಂದಣಿಗೆ ಚಾಲನೆ : ಭಾರೀ ಬೆಂಬಲ ಬೆಲೆ ನಿಗದಿ!

ದೇವನಹಳ್ಳಿ : ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು. ರೈತರು ಕೂಡ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಗುಡ್​ನ್ಯೂಸ್​ ಕೊಟ್ಟಿದ್ದು. ರಾಗಿ ಖರೀದಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ಮಾಹಿತಿ ದೊರೆತಿದೆ.

ದೇವನಹಳ್ಳಿ ಪಟ್ಟಣದ ಸರ್ಕಾರಿ‌ ಉಗ್ರಾಣದಲ್ಲಿನ ರಾಗಿ ಖರೀದಿ ಕೇಂದ್ರ ಇದಕ್ಕೆ ಚಾಲನೆ ನೀಡಿದ್ದು. ಆಹಾರ ಸಚಿವ ಕೆಹೆಚ್​​.ಮುನಿಯಪ್ಪ ರಾಗಿ ಖರೀದಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿ ಮಾಡಲು ಯೋಜನೆ ರೂಪಿಸಿದ್ದು. ಒಬ್ಬ ರೈತರಿಂದ ಕನಿಷ್ಟ 20 ಕ್ವಿಂಟಾಲ್​ ರಾಗಿ ಖರೀದಿ ಮಾಡಲಾಗುತ್ತದೆ ಎಂದು ಮಾಹಿತಿ ದೊರೆತಿದೆ.

ಒಂದು ಕ್ವಿಂಟಾಲ್​ ರಾಗಿ ಸರ್ಕಾರ 4290ರೂ ಹಣ ನಿಗಧಿ ಮಾಡಿದ್ದು. ಬಿಳಿ ಜೋಳ ಹೈಬ್ರೀಡ್​ಗೆ 3371ರೂ ಮತ್ತು ಭತ್ತಕ್ಕೆ 2300 ರೂ ಬೆಂಬಲ ಬೆಲೆ ನಿಗದಿ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES