Thursday, December 5, 2024

ಬೆಂಗಳೂರಿನಲ್ಲಿ ಪುಷ್ಪ-2 ಚಿತ್ರದ ಶೋ ಕ್ಯಾನ್ಸಲ್​ : ಕಾರಣ ತಿಳಿದರೆ ಶಾಕ್​ ಆಗ್ತೀರಾ !

ಬೆಂಗಳೂರು: ಪುಷ್ಪಾ 2 ಸಿನಿಮಾಕ್ಕೆ ಆರಂಭಿಕ ವಿಘ್ನ ಎದುರಾಗಿದ್ದು. ಬೆಂಗಳೂರಿನಲ್ಲಿ ಅರ್ಲಿ ಮಾರ್ನಿಂಗ್ ಶೋಗಳನ್ನು ಕ್ಯಾನ್ಸಲ್​ ಮಾಡಿ ಎಂದು ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳಬೇಕಿದ್ದ ಮಧ್ಯರಾತ್ರಿ 12 ಗಂಟೆಯ ಶೋ ಮತ್ತು ಬೆಳಗಿನ ಜಾವ 3 ಗಂಟೆಯ ಶೋಗಳನ್ನು ರದ್ದುಗೊಳಿಸಿ ಎಂದು ಬೆಂಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು. ಸಮಯ ಪಾಲನೆ ಮಾಡದೆ. ಅನಧಿಕೃತವಾಗಿ ಶೋ  ಮಾಡುವ ಹಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಇದರ ಕುರಿತು ಪುಷ್ಪ ಸಿನಿಮಾ ತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮಾರ್ನಿಂಗ್​ ಶೋಗಳನ್ನು ರದ್ದುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ ಎಂದಿನಂತೆ ಬೆಳಿಗ್ಗೆ 6 ಗಂಟೆಯಿಂದ ಸಿನಿಮಾ ಪ್ರದರ್ಶನ ಎಂದಿನಂತೆ ನಡೆಯಲಿದೆ ಎಂದು ಮಾಹಿತಿ ದೊರೆತಿದೆ.

ಈಗಾಗಲೇ ಬೆಳಗಿನ ಎರಡು ಶೋಗಳಿಗೆ ಜನ ಮುಂಗಡ ಟಿಕೆಟ್​ಗಳನ್ನು ಬುಕ್​ ಮಾಡಿದ್ದು. ರದ್ದಾಗುವ ಶೋಗಳ ಹಣವನ್ನು ಹಿಂದಿರುಗಿಸಲಾಗುತ್ತದೆ ಎಂದು ತಿಳಿದು ಬಂದಿದೆ.

 

 

RELATED ARTICLES

Related Articles

TRENDING ARTICLES