Tuesday, January 21, 2025

ಯಶ್​ ಹುಟ್ಟುಹಬ್ಬಕ್ಕೆ ಶುರುವಾಯಿತು ತಯಾರಿ : ಟಾಕ್ಸಿಕ್​ ಟೀಮ್​ನಿಂದ ಫ್ಯಾನ್ಸ್​ಗೆ ಬಿಗ್​​ ಸರ್​ಪ್ರೈಸ್​​ !

ಬೆಂಗಳೂರು: ರಾಕಿಂಗ್​ ಸ್ಟಾರ್​ ಯಶ್​ ಹುಟ್ಟುಹಬ್ಬಕ್ಕೆ ಇನ್ನೂ ಒಂದು ತಿಂಗಳು ಮೇಲೆ ನಾಲ್ಕು ದಿನಗಳು ಬಾಕಿಯಿವೆ.. ಆದ್ರೇ ರಾಕಿ ಅಭಿಮಾನಿಗಳಿಗೆ ಈಗಿನಿಂದಲೇ ಜೋಶ್​ ಶುರುವಾಗಿದೆ. ಈಗಿನಿಂದಲೇ ನ್ಯಾಷನಲ್​ ಸ್ಟಾರ್​ ಬರ್ತ್​ಡೇ ಟ್ರೆಂಡ್​ ಮಡ್ತಾಯಿದ್ದಾರೆ. ಹಾಗಾಧ್ರೇ ರಾಕಿಂಗ್​ ಫ್ಯಾನ್ಸ್​ ಜೋಶ್​ ಹೇಗಿದೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ.

ಯಶ್ ಅಭಿಮಾನಿಗಳಿಗೆ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ವೇಗ ಕಂಡು ಖುಷಿಯಾಗಿದ್ದರೆ, ಇನ್ನೊಂದು ಕಡೆ ತಮ್ಮ ನೆಚ್ಚಿನ ನಟ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಶೀಘ್ರದಲ್ಲಿಯೇ 39ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳು ಈಗಿನಿಂದಲೇ ಸೆಲೆಬ್ರೆಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಯಶ್ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನ ಈಗಿನಿಂದಲೇ ಟ್ರೆಂಡ್ ಮಾಡುತ್ತಿದ್ದಾರೆ. ರಾಕಿಂಗ್ ಸ್ಟಾರ್ ಯಶ್‌ಗೆ ಈ ವರ್ಷ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತಾರೆ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಹುಟ್ಟುಹಬ್ಬ ಸೆಲೆಬ್ರೆಟ್ ಮಾಡಿಕೊಳ್ಳುತ್ತಾರಾ ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಅದ್ಯಾವುದಕ್ಕೂ ಕಾಯದೆ ಅಭಿಮಾನಿಗಳು ಬರ್ತ್‌ಡೇ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಟ್ವಿಟರ್ ನಲ್ಲಿ ಡಿಪಿಗಳನ್ನು ಡಿಸೈನ್ ಮಾಡಿ ಅಪ್ಲೋಡ್​ ಮಾಡ್ತಾಯಿದ್ದಾರೆ

ಯಶ್ ಫ್ಯಾನ್ಸ್‌ಗೆ ನೆಚ್ಚಿನ ನಟನ ಹುಟ್ಟುಹಬ್ಬವನ್ನು ‘ರಾಕಿಂಗ್ ಹಬ್ಬ 2025’ ಆಗಿ ಆಚರಣೆ ಮಾಡಬೇಕು ಅನ್ನೋ ಆಸೆ. ಹೀಗಾಗಿ ಟೈಟಲ್ ಕೊಟ್ಟು ತಾವೇ ಡಿಪಿಯನ್ನು ಹಂಚಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. 34 ದಿನ ಬಾಕಿ ಇರುವಾಗಲೇ ಅವರ ಸೆಲೆಬ್ರೆಷನ್ ಶುರುವಾಗಿದೆ. ಈಗಿನಿಂದಲೇ ಅಡ್ವಾನ್ಸ್ ಆಗಿ ಹುಟ್ಟುಹಬ್ಬದ ಶುಭಾಶಯಗಳನ್ನು ತಮ್ಮ ನೆಚ್ಚಿನ ನಟನಿಗೆ ತಿಳಿಸುತ್ತಿದ್ದಾರೆ

ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾವನ್ನು ಇಡೀ ದೇಶವೇ ಎದುರು ನೋಡುತ್ತಿದೆ. ‘ಕೆಜಿಎಫ್ 2’ ಅಂತಹ ಮೆಗಾ ಬ್ಲಾಕ್‌ ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮುಂದಿನ ಚಿತ್ರ ಹೇಗಿರುತ್ತೆ ಅನ್ನೋ ಕುತೂಹಲವಿದೆ. ಈ ಬಾರಿ ಯಶ್ ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಕೂಡ ಹಬ್ಬಿದೆ. ಅದಕ್ಕೆ ಹಾಲಿವುಡ್ ತಂತ್ರಜ್ಞರು ಕೂಡ ‘ಟಾಕ್ಸಿಕ್’ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಚಿಕ್ಕದೊಂದು ತುಣುಕು ಕೂಡ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಹುಟ್ಟುಹಬ್ಬದಂದು ಏನಾದರೂ ಸರ್ಪ್ರೈಸ್ ಕೊಡಬಹುದೆಂದು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕಳೆದ ಬಾರಿ ಕೂಡ ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದರು. ಆದರೂ ಅಭಿಮಾನಿಗಳು ಸೆಲೆಬ್ರೆಟ್ ಮಾಡುವುದಕ್ಕೆ ಹೋಗಿ ಅವಘಡ ನಡೆದಿತ್ತು. ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು. ಆ ಕಹಿ ಘಟನೆಯನ್ನು ನೆನೆದು ಬರ್ತ್‌ಡೇ ಸೆಲೆಬ್ರೆಟ್ ಮಾಡಿಕೊಳ್ಳುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆದರೆ ಅದಿನ್ನೂ ಸ್ಪಷ್ಟವಾಗಿಲ್ಲ.

 

RELATED ARTICLES

Related Articles

TRENDING ARTICLES