ಹಾಸನ : ನಾಡ ಹಬ್ಬ ದಸರಾದಲ್ಲಿ ಎಲ್ಲರ ಅಚ್ಚು ಮೆಚ್ಚಿನ ಆನೆಯಾಗಿದ್ದ ಅರ್ಜುನ ಆನೆ ಸಾವನ್ನಪ್ಪಿ ಇಂದಿಗೆ ಒಂದು ವರ್ಷ ಕಳೆದಿದೆ.ಒಂದನೇ ವರ್ಷದ ನೆನಪಿನಲ್ಲಿ ಇಂದು ಅರ್ಜುನನ ಸ್ಮಾರಕವನ್ನು ನಿರ್ಮಿಸಿ ಉದ್ಘಾಟನೆ ಮಾಡುವ ಯೋಜನೆ ರೂಪಿಸಲಾಗಿತ್ತು. ಆದರೆ ಇನ್ನು ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಉದ್ಘಾಟನ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
2023 ಡಿಸೆಂಬರ್ 4 ರಂದು ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಯಸಳೂರು ಹೋಬಳಿ, ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅಂಬಾರಿ ಆನೆ ಅರ್ಜುನ ಸಾವನ್ನಪ್ಪಿದ್ದನು. ಅರ್ಜುನ ಸಾವನ್ನಪ್ಪಿದ ವಿಷಯಬ ಕೇಳಿ ಇಡೀ ರಾಜ್ಯದ ಜನ ಕಂಬನಿಮಿಡಿದಿದ್ದರು ಮತ್ತು ಅನೇಕ ಜನ ಅರ್ಜುನನಿಗೆ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದರು.
ಇದಕ್ಕೆ ಒಪ್ಪಿದ ರಾಜ್ಯ ಅರಣ್ಯ ಇಲಾಖೆ ಬಳ್ಳೆಯೆಂಬಲ್ಲಿ ಅರ್ಜುನನಿಗೆ ಸ್ಮಾರಕ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಂದು ಅರ್ಜುನನ ಪುತ್ಥಳಿಯನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಉದ್ಘಾಟಿಸಬೇಕಿತ್ತು. ಆದರೆ ಇನ್ನು ಸ್ಮಾರಕ ನಿರ್ಮಾಣ ಕಾರ್ಯ ಪೂರ್ಣಗೊಳ್ಳದ ಹಿನ್ನಲೆ ಉದ್ಘಾಟನ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಮಾಹಿತಿದೆ.