Wednesday, January 15, 2025

ಅದ್ದೂರಿಯಾಗಿ ಎರಡನೇ ಮದ್ವೆಯಾದ ನಾಗಚೈತನ್ಯ : ಚಿತ್ರರಂಗದ ಗಣ್ಯರು ಹಾಜರ್​​ !

ಹೈದರಾಬಾದ್​ : ನಾಗಚೈತನ್ಯ ಹಾಗೂ ಶೋಭಿತಾ ಕಲ್ಯಾಣ ಹೈದ್ರಾಬಾದ್‌ನಲ್ಲಿ ಇಂದು ರಾತ್ರಿ 8:15ಕ್ಕೆ  ಅದ್ದೂರಿಯಾಗಿ ನೆರವೇರಲಿದೆ. ಈ ಕಲ್ಯಾಣಕ್ಕೆ ಸಾಕ್ಷಾತ್ ಸ್ವರ್ಗ ಲೋಕವೇ ಭೂಮಿಗೆ ಬಂದಿದೆ ಅನ್ನೋ ರೀತಿಯಾಗಿ ಅಲಂಕಾರ ಮಾಡಿದ್ದು. ನಾಗಚೈತನ್ಯ ಮತ್ತು ಶೋಭಿತಾ ಅವರ ಅದ್ಧೂರಿ ಮದುವೆ ಸಮಾರಂಭಕ್ಕೆ ನಾಗಾರ್ಜುನ ಒಡೆತನದ ಅನ್ನಪೂರ್ಣ ಸ್ಟುಡಿಯೋ ಸಾಕ್ಷಿಯಾಗಿದೆ. ನವ ಜೋಡಿಗೆ ಶುಭ ಕೋರಲು ಗಣ್ಯಾತಿಗಣ್ಯರ ದಂಡು ಹೈದ್ರಾಬಾದ್‌ನಲ್ಲಿ ಬಂದು ಇಳಿದಿದೆ.

ತೆಲುಗು ಸಂಪ್ರದಾಯದ ಪ್ರಕಾರ ನಡೆಯುತ್ತಿರುವ ಈ ಮದುವೆ ಒಂದಲ್ಲ, ಎರಡಲ್ಲ, ಎಂಟು ಗಂಟೆ ನಡೆಯಲಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಯಾಕೆಂದರೆ ನಾಗಚೈತನ್ಯ ಜೊತೆ ಮದುವೆಯಾಗುತ್ತಿರುವ ಶೋಭಿತಾ ಮೊದಲಿಂದ ಆಧ್ಯಾತ್ಮಿಕ ಮನೋಭಾವದವರು. ಸಂಪ್ರದಾಯ-ಆಚರಣೆ-ಪದ್ದತಿಗಳಲ್ಲಿ ಅಪಾರವಾದ ನಂಬಿಕೆಯನ್ನು ಹೊಂದಿರುವವರು. ತಮ್ಮ ಮದುವೆ ಸಾಂಪ್ರದಾಯಿಕವಾಗಿಯೇ ನಡೆಯಬೇಕು ಎನ್ನುವ ಕನಸನ್ನು ಮೊದಲಿಂದ ಕಂಡಿರುವ ಶೋಭಿತಾ ದೇವಾಲಯದ ಗಂಟೆ, ಹಿತ್ತಾಳೆ ದೀಪ, ಬಾಳೆ ಎಲೆ ಮತ್ತು ಹಸುವಿನ ಚಿತ್ರಣವನ್ನು ಹೊಂದಿರುವ ಸಾಂಪ್ರದಾಯಿಕ ಶೈಲಿಯ ನೀಲಿ ಬಣ್ಣದ ಆಮಂತ್ರಣ ಪತ್ರಿಕೆಯನ್ನು ಕೂಡ ಮುದ್ರಿಸಿದ್ದರು.

ಅಕ್ಕಿನೇನಿ ಕುಟುಂಬಕ್ಕೆ ಟಾಲಿವುಡ್‌ನಲ್ಲಿ ವಿಶೇಷವಾದ ಗೌರವವಿದೆ. ಟಾಲಿವುಡ್ ದಿಗ್ಗಜ ದಿವಂಗತ ನಾಗೇಶ್ವರ ರಾವ್, ಅವರ ಪುತ್ರ ನಾಗಾರ್ಜುನಗೆ ಚಿತ್ರರಂಗದಲ್ಲಿ ತಮ್ಮದೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಗ ಅವರ ಹಾದಿಯಲ್ಲಿ ನಾಗಚೈತನ್ಯ ಸಾಗುತ್ತಿದ್ದಾರೆ. ಅಲ್ಲದೆ ಈ ಕುಟುಂಬ ಎಲ್ಲಾ ಚಿತ್ರರಂಗದೊಂದಿಗೆ ಆತ್ಮೀಯವಾದ ಒಡನಾಟವನ್ನು ಇಟ್ಟುಕೊಂಡಿದೆ.ಹಾಗಾಗಿ ಈ ಮದುವೆಗೆ ಸೆಲೆಬ್ರಿಟಿಗಳ ದಂಡೇ ಆಗಮಿಸಿ ನವ ಜೋಡಿಗೆ ಶುಭ ಕೋರಿದೆ.

ಕೇವಲ ತೆಲುಗು ಚಿತ್ರರಂಗ ಅಷ್ಟೇ ಅಲ್ಲದೆ. ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಚಿತ್ರರಂಗದಿಂದಲೂ ತಾರೆಯರು ಈ ಮದುವೆಗೆ ಆಗಮಿಸುತ್ತಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಧುಲಿಪಾಲ ಮದುವೆಗೆ ಆಗಮಿಸುತ್ತಿರುವ ಸೆಲೆಬ್ರಿಟಿಗಳ ದೊಡ್ಡ ಪಟ್ಟಿ ನೋಡುವುದಾದರೆ.‌

ಟಾಲಿವುಡ್‌ನ ಮೆಗಾ ಕುಟುಂಬ ಮೆಗಾಸ್ಟಾರ್ ಚಿರಂಜೀವಿ, ಅವರ ಪುತ್ರ ರಾಮ್‌ ಚರಣ್, ಪತ್ನಿ ಉಪಾಸನಾ ಕೊನಿಡೆಲಾ, ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು, ಅವರ ಪತ್ನಿ ನಮ್ರತಾ ಶಿರೋಡ್ಕರ್ ಆಗಮಿಸುವ ಬಗ್ಗೆ ಮಾಹಿತಿ ಇದೆ. ಹಾಗೇ ಪ್ಯಾನ್ ಇಂಡಿಯಾ ಸ್ಟಾರ್ ಡೈರೆಕ್ಟರ್ ಎಸ್‌.ಎಸ್ ರಾಜಮೌಳಿ ಕೂಡ ಭಾಗಿಯಾಗಲಿದ್ದರೆ ಎಂದು ತಿಳಿದು ಬಂದಿದೆ.

ಇನ್ನೂ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್, ಲೇಡಿ ಸೂಪರ್‌ಸ್ಟಾರ್ ನಯನತಾರಾ ಆಗಮಿಸಲಿದ್ದಾರೆ ಎನ್ನಲಾಗಿದೆ. ಹಾಗೇ ಬಾಲಿವುಡ್‌ನಿಂದ ಶಾರುಖ್ ಖಾನ್, ಆಮಿರ್ ಖಾನ್, ಕಿರಣ್ ರಾವ್, ರಣ್‌ಬೀರ್, ಆಲಿಯಾ ಭಟ್ ಜೊತೆ ಉತ್ತಮ ಒಡನಾಟ ಇಟ್ಟುಕೊಂಡಿರುವುದರಿಂದ ಇವರೆಲ್ಲರೂ ಆಗಮಿಸಿ, ನವ ವಧುವಿಗೆ ಶುಭ ಹಾರೈಸಲಿದ್ದಾರೆ.

ಒಟ್ಟಾರೆಯಾಗಿ ಹೊಸ ಜೀವನ ಶುರು ಮಾಡ್ತಿರೋ ಅಕ್ಕಿನೇನಿ ಕುಟುಂಬದ ಕುಡಿಗೆ ಎಲ್ಲಾ ಕಡೆಯಿಂದಲೂ ಶುಭ ಹಾರೈಕೆ ಹರಿದು ಬರ್ತಾಯಿವೆ.

 

RELATED ARTICLES

Related Articles

TRENDING ARTICLES