ಮೈಸೂರು: ಮೈಸೂರು ಮಹಾನಗರ ಪಾಲಿಕ ಕಟ್ಟಡ ಶಿಥಿಲವಸ್ಥೆ ತಲುಪಿದ್ದು. ನೂರಾರು ವರ್ಷಗಳ ಹಳೆಯ ಪಾರಂಪರಿಕ ಕಟ್ಟಡ ಕುಸಿಯುವ ಸ್ಥಿತಿಗೆ ತಲುಪಿದೆ. ಜನರ ಸಮಸ್ಯೆ ಆಲಿಸುವ ಅಧಿಕಾರಿಗಳೆ ಜೀವ ಭಯದಲ್ಲಿ ಬದುಕುವ ಸ್ಥಿತಿಗೆ ತಲುಪಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರು ಪಾಲಿಕೆ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು. ಕಟ್ಟಡದ ಮೇಲ್ಚಾವಣಿ ಸಂಪೂರ್ಣವಾಗಿ ಹಾಳಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ಕಟ್ಟಡದ ಮೇಲ್ಚಾವಣಿಯಿಂದ ನೀರು ಸೋರುತ್ತಿದ್ದು. ಇದರ ಕುರಿತು ಸರಿಯಾದ ಕ್ರಮ ಕೈಗೊಳ್ಳದ ಅಧಿಕಾರಿಗಳು ಕೇವಲ ಟಾರ್ಪಲ್ ಹೊದಿಸಿ ಸುಮ್ಮನಾಗಿದ್ದಾರೆ.
ಇದೇ ರೀತಿಯಾಗಿ ಮೈಸೂರಿನ ಅನೇಕ ಪಾರಂಪರಿಕ ಕಟ್ಟಡಗಳು ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿದ್ದು. ಅದೇ ರೀತಿಯಾಗಿ ಮೈಸೂರು ಪಾಲಿಕೆಯ ಕಟ್ಟಡವು ಕೂಡ ಹಾಳಾಗುವ ಸ್ಥಿತಿ ತಲುಪಿದೆ.
ಪ್ರತಿನಿತ್ಯ ಕೆಲಸಗಳಿಗಾಗಿ ಸಾವಿರಾರು ಸಾರ್ವಜನಿಕರು ಪಾಲಿಕೆ ಕಛೇರಿಗೆ ಭೇಟಿ ನೀಡುತ್ತಿದ್ದು, ಪಾಲಿಕೆಯ ಆಯುಕ್ತರು ಸೇರಿದಂತೆ ನೂರಾರು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಗೆ ಯಾವುದೇ ಸಮಸ್ಯೆಯಾದರು ಹೋಗಿ ರಕ್ಷಣೆ ಮಾಡುವ ಪಾಲಿಕೆ ಸಿಬ್ಬಂದಿಗಳೆ ಜೀವ ಭಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.