Thursday, January 9, 2025

ಮಹರಾಷ್ಟ್ರ ಸಿಎಂ ಹೆಸರು ಘೋಷಣೆ : ಫಡ್ನವೀಸ್​ಗೆ ಒಲಿದ ಸಿಎಂ ಪಟ್ಟ !

ಮುಂಬೈ : ರಾಷ್ಟ್ರದ ಕುತೂಹಲ ಕೆರಳಿಸಿದ್ದ ಮಹರಾಷ್ಟ್ರ ಸಿಎಂ ಅಭ್ಯರ್ಥಿಯ ಹೆಸರು ಕೊನೆಗು ಘೋಷಣೆಯಾಗಿದ್ದು. ಬಿಜೆಪಿಯ ದೇವೇಂದ್ರ ಫಡ್ನವೀಸ್​​ ಮಹರಾಷ್ಟ್ರದ ಸಿಎಂ ಆಗಿ ನಾಳೆ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಮಾಹಿತಿ ದೊರೆತಿದೆ.

ಚುನಾವಣಾ ಫಲಿತಾಂಶ ಬಂದು ಕಳೆದ 12 ದಿನಗಳಿಂದ ಮಹರಾಷ್ಟ್ರದ ಸಿಎಂ ಯಾರು ಎಂಬ ಪ್ರಶ್ನೆಗೆ ಕೊನೆಗು ಉತ್ತರ ದೊರೆತಿದ್ದು. ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಮತ್ತೆ ಸಿಎಂ ಗಾದಿಗೆ ಏರುವುದು ಖಚಿತವಾಗಿದೆ ಎಂದು ಮಾಹಿತಿ ದೊರೆತಿದೆ. ಏಕನಾಥ್​ ಶಿಂಧೆ ತಮ್ಮ ಸಿಎಂ ಸ್ಥಾನವನ್ನು ಬಿಟ್ಟುಕೊಟ್ಟಿದ್ದು, ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಅದರ ಜೊತೆಗೆ NCPಯ ಅಜಿತ್​ ಪವಾರ್​ ಕೂಡ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ದೇವೇಂದ್ರ ಫಡ್ನೀವೀಸ್​ ಸಿಎಂ ಆಗಲು ಮೈತ್ರಿ ಪಕ್ಷದ ಎಲ್ಲಾ ಶಾಸಕರು ಒಮ್ಮತವನ್ನು ಸೂಚಿಸಿದ್ದು. ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತದಿಂದ ಫಡ್ನವೀಸ್​ರನ್ನು ಸಿಎಂ ಆಗಿ ಘೋಶಿಸಿದ್ದಾರೆ.

ಕಗ್ಗಾಂಟಾಗಲಿದೆಯ ಸಚಿವ ಖಾತೆ ಹಂಚಿಕೆ ?

ಮಹರಾಷ್ಟ್ರದ  ಸಿಎಂ ಆಯ್ಕೆಯಾಗುತ್ತಲೆ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆಗಳು ಆರಂಭವಾಗಿದ್ದು. ಯಾರಿಗೆ ಎಷ್ಟು ಸ್ಥಾನಗಳು ಸಿಗಲಿವೆ ಎಂದು ಕುತೂಹಲ ಮೂಡಿಸಿದೆ. ಸಿಎಂ ಸ್ಥಾನ ಬಿಟ್ಟು ಕೊಟ್ಟಿರುವ ಏಕನಾಥ್​ ಶಿಂಧೆ ಗೃಹ ಖಾತೆ, ಹಣಕಾಸು ಖಾತೆ, ನಗರಾಭಿವೃದ್ದಿ ಖಾತೆ ಸೇರಿದಂತೆ ಕೆಲವು ಮುಖ್ಯ ಖಾತೆಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಮಾಹಿತಿ ದೊರೆತಿದೆ.

ಪ್ರತಿ ಆರು ಶಾಸಕರಿಗೆ ಒಂದು ಸಚಿವ ಸ್ಥಾನದಂತೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ಮಾಹಿತಿ ದೊರೆತಿದ್ದು. ಆ ರೀತಿಯಾಗಿ ಬಿಜೆಪಿ ಕನಿಷ್ಟ 22 ಸಚಿವ ಸ್ಥಾನ, ಶಿಂಧೆ ಶಿವಸೇನೆಗೆ 10 ರಿಂದ 12 ಸಚಿವ ಸ್ಥಾನ, ಮತ್ತು ಎನ್​ಸಿಪಿಗೆ 8 ರಿಂದ 9 ಸ್ಥಾನಗಳು ಸಿಗಲಿದೆ ಎಂದು ಮಾಹಿತಿ ದೊರೆತಿದೆ.

 

 

RELATED ARTICLES

Related Articles

TRENDING ARTICLES