ಬೆಂಗಳೂರು : ನೆನ್ನೆ(ಡಿ.03) ನಡೆದ ವಿಶ್ವ ಅಂಗವಿಕಲಚೇತನರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯರಿಗೆ ಬಾಲಕಿಯೊಬ್ಬಳು ‘ಸೂಪರ್ ಸಿಎಂ’ ಎಂದಿದ್ದು. ಬಾಲಕಿಯ ಮಾತಿನಿಂದ ಸಂತಸಗೊಂಡ ಸಿಎಂ ಬಾಲಕಿಯ ತಬ್ಬಿ ಆಶೀರ್ವದಿಸಿದರು.
ಸಾಮಾನ್ಯವಾಗಿ ನಾವು ಸಿಎಂ ಸಿದ್ದರಾಮಯ್ಯನವರು ಬೇರೆಯವರಿಗೆ ಗದರುವುದು, ಬೈಯುವುದನ್ನು ಕಂಡಿರುತ್ತೇವೆ. ಆದರೆ ನೆನ್ನೆ ನಡೆದ ವಿಶ್ವ ಅಂಗವಿಕಲಚೇತನರ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯರ ಮಗು ಮನಸನ್ನು ನೋಡವ ಅವಕಾಶ ಜನರಿಗೆ ಒದಗಿ ಬಂದಿದೆ. ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಸಮಯದಲ್ಲಿ ವೇದಿಕೆ ಮೇಲಿದ್ದ ಬಾಲಕಿಯೊಬ್ಬಳು ಸಿಎಂಗೆ ಹೂ ಕೊಟ್ಟು, ಕೈ ಸನ್ನೆ ಮಾಡುವ ಮೂಲಕ ಸೂಪರ್ ಸಿಎಂ ಎಂದು ಹೇಳಿದರು. ಇದರಿಂದ ಸಂತಸಗೊಂಡ ಸಿಎಂ ಬಾಲಕಿಯನ್ನು ಬಳಿಗೆ ಕರೆದು ಆಕೆಯನ್ನು ತಬ್ಬಿ ಆಶೀರ್ವದಿಸಿದರು.