ಉತ್ತರಖಂಡ್ : ಹರಿದ್ವಾರದ ಗಂಗಾನದಿಯ ನೀರು ಕುಡಿಯಲು ಯೋಗ್ಯವಲ್ಲ. ಸ್ನಾನಕ್ಕೆ ಸೂಕ್ತ ಎಂದು ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ಉತ್ತರ ಪ್ರದೇಶ ಗಡಿಯಲ್ಲಿ ಬರುವ ಗಂಗಾ ನದಿಯಲ್ಲಿ ಪ್ರತಿ ವರ್ಷ 8 ಕಡೆ ನೀರನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ.
ಇತ್ತೀಚಿನ ನವೆಂಬರ್ ತಿಂಗಳ ಪರೀಕ್ಷೆಯಲ್ಲಿ ಗಂಗಾ ನದಿಯ ನೀರು ‘ಬಿ’ ಕೆಟಗರಿ ಎಂದು ಕಂಡುಬಂದಿದೆ. ನದಿಯ ನೀರನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ‘ಎ’ ಕೆಟಗರಿ ಕನಿಷ್ಠ ವಿಷಕಾರಿಯಾಗಿದೆ. ಅಂದರೆ ನೀರನ್ನು ಸೋಂಕುನಿವಾರಣೆಗೊಳಿಸಿದ ನಂತರ ಕುಡಿಯಲು ಬಳಸಬಹುದು. ‘ಇ’ ಕೆಟಗರಿ ಅತ್ಯಂತ ವಿಷಕಾರಿಯಾಗಿದೆ.
ಖಾಸಗಿ ಮಾಧ್ಯಮದ ಜೊತೆ ಮಾತನಾಡಿರುವ ಯುಕೆಪಿಸಿಬಿ(UKPCB) ಯ ಪ್ರಾದೇಶಿಕ ಅಧಿಕಾರಿ ರಾಜೇಂದ್ರ ಸಿಂಗ್, ‘ನಾಲ್ಕು ನಿಯತಾಂಕಗಳ ಆಧಾರದ ಮೇಲೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟವನ್ನು 5 ವರ್ಗಗಳಾಗಿ ವಿಂಗಡಿಸಿದೆ. ಈ ಮೂಲಕ ಗಂಗೆಯ ಗುಣಮಟ್ಟವು ‘ಬಿ’ ವರ್ಗದಲ್ಲಿದ್ದು. ಈ ನೀರು ಸ್ನಾನಕ್ಕೆ ಸೂಕ್ತವಾಗಿದೆ. ಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯ ಅರ್ಚಕ ಉಜ್ಜಲ್ ಪಂಡಿತ್ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಮಾನವರ ತಾಜ್ಯದಿಂದ ಗಂಗೆ ಮಲಿನಗೊಳುತ್ತಿದ್ದಾಳೆ ಎಂದಿದ್ದಾರೆ.