Wednesday, December 4, 2024

50 ಸಾವಿರ ಸಾಲಕ್ಕೆ, ಲಕ್ಷಾಂತರ ರೂ ಬಡ್ಡಿ: ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಕಾರ್ಮಿಕ

ಚಿಕ್ಕೋಡಿ : ಸಾಲಗಾರರ ಕಾಟಕ್ಕೆ ಬೇಸತ್ತ ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದು. ಕೇವಲ 50 ಸಾವಿರ ಸಾಲ ಪಡೆದಿದ್ದ ಕಾರ್ಮಿಕ ಅದಕ್ಕೆ ಲಕ್ಷಾಂತರ ರೂಪಾಯಿ ಬಡ್ಡಿ ಕಟ್ಟಿದ್ದನು. ಆದರೆ ಬಡ್ಡಿ ಹಣ ನೀಡಿದರು, ಇನ್ನೂ ಹೆಚ್ಚಿನ ಹಣ ನೀಡುವಂತೆ ಪೀಡಿಸುತ್ತಿದ್ದಕ್ಕೆ ಬೇಸತ್ತ ಕಾರ್ಮಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ನಡೆದ ಘಟನೆ. ಗ್ರಾಮದ ಅಪ್ಪಾಸಾಬ ಕಂಬಾರ ಆತ್ಮಹತ್ಯೆಗೆ ಶರಣಾದ ಕೂಲಿ ಕಾರ್ಮಿಕ ಎಂದು ಮಾಹಿತಿ ದೊರೆತಿದೆ. ಅಪ್ಪಾಸಾಬ ಖಾಸಗಿ ಕ್ರಷರ್​​ನಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ನಿರ್ವಹಿಸುತ್ತಿದ್ದನು. ವೈಯಕ್ತಿಕ ಕಾರಣಗಾಳಿಗಾಗಿ ರೇಖಾ ಸಮಗಾರ ಮತ್ತು ಭೀಮು ವಾಳಕೆ ಎಂಬುವವರಿಂದ ಅಂದಾಜು 50 ಸಾವರ ಸಾಲ ಪಡೆದಿದ್ದನು ಮತ್ತು ಸಾಲಕ್ಕೆ ಪ್ರತಿಯಾಗಿ ಲಕ್ಷಾಂತರ ರೂಪಾಯಿ ಬಡ್ಡಿಯನ್ನು ಕಟ್ಟಿದ್ದನು.

ಆದರೆ ಇತ್ತೀಚೆಗೆ ಸಾಲಗಾರರು ಬಡ್ಡಿ ಹಣದ ಜೊತೆಗೆ ಇನ್ನು ಹೆಚ್ಚಿ ಹಣ ನೀಡುವಂತೆ ಪೀಡಿಸುತ್ತಿದ್ದರಿಂದ ಬೇಸತ್ತ ಕಾರ್ಮಿಕ ಅಪ್ಪಾಸಾಬ ಆತ್ಮಹತ್ಯೆ ಮಾಡಿಕೊಂಡಿದ್ದು. ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ಸಾಲ ನೀಡಿದ ರೇಖಾ ಮತ್ತು ಭೀಮಾ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ರಾಯಭಾಗ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.

 

RELATED ARTICLES

Related Articles

TRENDING ARTICLES