ಬೆಂಗಳೂರು : ಕನ್ನಡದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬಾಲಿವುಡ್ಗು ಕಾಲಿಟ್ಟಿದ್ದು. ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್ ಅವರ ನಿರ್ದೇಶನದ ಛತ್ರಪತಿ ಶಿವಾಜಿ ಮಹರಾಜ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.
ಕಳೆದ ವರ್ಷ ಬಿಡುಗಡೆಗೊಂಡಿದ್ದ ಕಾಂತಾರ ಸಿನಿಮಾ ರಿಷಬ್ ಶೆಟ್ಟಿಯವರನ್ನು ಉತ್ತುಂಗದ ಶಿಖರಕ್ಕೆ ಕರೆದೊಯ್ದಿತ್ತು. ಈ ಸಿನಿಮಾಗೆ ಇಡೀ ಭಾರತ ಚಿತ್ರರಂಗ ತಲೆಬಾಗಿತ್ತು. ಈ ಸಿನಿಮಾದ ನಂತರ ಅದರ ಮುಂದಿನ ಭಾಗದ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದು. ಈ ಸಿನಿಮಾ ಮುಂದಿನ ವರ್ಷ ಅಂದರೆ 2025ರ ಅಕ್ಟೋಬರ್ 2ರಂದು ತೆರೆಕಾಣಲಿದೆ ಎಂದು ಚಿತ್ರ ತಂಡ ಮಾಹಿತಿ ಹಂಚಿಕೊಂಡಿದೆ. ಇದರ ನಡುವೆ ತೆಲುಗಿನ “ಜೈ ಹನುಮಾನ್” ಸಿನಿಮಾದಲ್ಲಿಯು ರಿಷಬ್ ನಟಿಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ.
ಇವೆಲ್ಲ ಚಿತ್ರಗಳ ನಡುವೆ ಮತ್ತೊಂದು ಹೊಸ ಮಾಹಿತಿ ದೊರೆತಿದ್ದು. ಬಾಲಿವುಡ್ ಸಂದೀಪ್ ಸಿಂಗ್ ಅವರ ನಿರ್ದೇಶನದ ಬಾಲಿವುಡ್ ಚಿತ್ರ ‘ದಿ ಪ್ರೈಡ್ ಆಫ್ ಭಾರತ್, ಛತ್ರಪತಿ ಶಿವಾಜಿ ಮಹರಾಜ್’ ಸಿನಿಮಾದಲ್ಲಿ ರಿಷಬ್ ನಟಿಸುತ್ತಿದ್ದಾರೆ ಎಂದು ಮಾಹಿತಿ ದೊರೆತಿದೆ. ಎಲ್ಲಾ ಅಂದು ಕೊಂಡತೆ ಆದರೆ ಈ ಸಿನಿಮಾ 2027ರ ಜನವರಿ 21 ರಂದು ತೆರೆಕಾಣಲಿದೆ ಎಂದು ಮಾಹಿತಿ ದೊರೆತಿದೆ.