Wednesday, December 4, 2024

ರಾಮಾಯಣ ನಾಟಕ: ವೇದಿಕೆಯಲ್ಲೇ ಜೀವಂತ ಹಂದಿ ಕೊಂದು ಮಾಂಸ ತಿಂದ ರಾಕ್ಷಸ ಪಾತ್ರದಾರಿ .!

ಒಡಿಶಾ : ವೇದಿಕೆಯಲ್ಲಿಯೇ ಜೀವಂತ ಹಂದಿಯನ್ನು ಕೊಂದು ಅದರ ಹೊಟ್ಟೆಯನ್ನು ಸೀಳಿ ಹಸಿ ಮಾಂಸವನ್ನು ತಿಂದಿರುವ ಘಟನೆ ಒಡಿಶಾದ ಬಹರಾಂಪುರ್ ಜಿಲ್ಲೆಯಲ್ಲಿ ನಡೆದಿದೆ.

ರಾಮಾಯಣಕ್ಕೆ ಸಂಬಂಧಿಸಿದ ನಾಟಕ ಮಾಡುವಾಗ ರಾಕ್ಷಸ ಪಾತ್ರದಾರಿಯೊಬ್ಬ ವೇದಿಕೆಯಲ್ಲಿಯೇ ಜೀವಂತ ಹಂದಿಯನ್ನು ಕೊಂದು ಅದರ ಹೊಟ್ಟೆಯನ್ನು ಸೀಳಿ ಹಸಿ ಮಾಂಸವನ್ನು ತಿಂದಿರುವ ಘಟನೆ ಒಡಿಶಾದ ಬಹರಾಂಪುರ್ ಜಿಲ್ಲೆಯಲ್ಲಿ ನಡೆದಿದೆ. ಬಹರಾಂಪುರದ ಹಿಂಜಿ ಪೊಲೀಸ್ ಠಾಣೆಯ ರಾಲಾಬ್ ಎಂಬ ಹಳ್ಳಿಯಲ್ಲಿ ನವೆಂಬರ್ 24 ರಂದು ಈ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ರಾಕ್ಷಸ ಪಾತ್ರದಾರಿಯಾಗಿದ್ದ ಭೀಮಾಂಧರ್ ಗೌಡಾ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ವಿಶೇಷವೆಂದರೆ ಈ ವಿಚಾರ ಸದ್ಯ ನಡೆಯುತ್ತಿರುವ ಒಡಿಶಾ ವಿಧಾನಸಭೆ ಕಲಾಪದಲ್ಲೂ ಚರ್ಚೆಯಾಗಿ, ಅನೇಕ ಶಾಸಕರು ಕೃತ್ಯವನ್ನು ಖಂಡಿಸಿದ್ದಾರೆ. ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಕ್ರಮವಹಿಸಬೇಕು ಎಂದು ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES